ಎರಡು ಬಾರಿ ಮುಖ್ಯಂಮತ್ರಿಯಾಗಿದ್ದವರು. ಕುರಿಸಾಗಣಿಕೆಯಲ್ಲಿ ಬಿಸಿ. ಯಾಕೀಗೆ?

ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳೆ ಹೆಚ್ಚು ಆಳುತಿದ್ದು, ಪ್ರಾದೇಶಿಕ ಪಕ್ಷಗಳು ತೀರ ಕಡಿಮೆ. ಅದರಲ್ಲೂ ಪ್ರಾದೇಶಿಕ ಪಕ್ಷಗಳೊಳಗೆ ಕರ್ನಾಟಕದಲ್ಲಿ ಜನಪ್ರಿಯತೆ ಪಡೆದ ಏಕೈಕ ಪಕ್ಷ ಜನತಾ ದಳ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಯಾಗಿದ್ದು, ಅಧಿಕಾರ ಕಳೆದುಕೊಂಡ ಎಚ್ ಡಿ.‌ಕೆ ಈಗ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಹೊಸ ಬದಲಾವಣೆಗೆ ನಿಂತ್ತಿದ್ದಾರೆ. ಮಣ್ಣಿನ ಮಗ ಎಂದೆ ಕರೆಯಲ್ಪಡುವ ಸನ್ಮಾನ್ಯ ಶ್ರೀ ದೇವೆಗೌಡ ಅವರ ಮಗ ಎಚ್ ಡಿ ಕುಮಾರಸ್ವಾಮಿ ಅವರ ಧಿಡೀರ್ ಬದಲಾವಣೆಗೆ ಕಾರಣ ಏನು ಎಂಬುದು ತಿಳಿಯದ ವಿಚಾರ. ಏನೆ ಇದ್ದರು ರಾಜ್ಯದ ರಾಜಕೀಯದಲ್ಲಿ ನೂರಾರು ಬದಲಾವಣೆ ಕ್ಷಣದಿಂದ ಕ್ಷಣಕ್ಕೆ ನಡೆಯುತಿದ್ದರು ಎಚ್ ಡಿಕೆ ಮಾತ್ರ
ಕುರಿ ಸಾಕಾಣಿಕೆಗಾಗಿ ಸುಸಜ್ಜಿತವಾದ ಶೆಡ್ ನ್ನ ನಿರ್ಮಿಸಿದ್ದಾರೆ. ಇತ್ತೀಚೆಗೆ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ಕೆಲ ದಿನಗಳ ಹಿಂದೆ ಜೆ.ಪಿ ಭವನದಲ್ಲಿ ಮಾತನಾಡಿದ್ದ ಹೆಚ್​​ಡಿಕೆ, ಬಿಡದಿಯ ತೋಟದ ಮನೆಯೇ ನನ್ನ ಖಾಯಂ ಆಸ್ತಿ. ಬದುಕಿರುವವರೆಗೂ ಇದೇ ನನ್ನ ಆಸ್ತಿ. ನಾನೀಗ ಬಿಡದಿ ತೋಟದ ಮನೆಯಲ್ಲಿಯೇ ಇದ್ದೇನೆ. ಯಾವುದೇ ವೆಸ್ಟ್ ಯಂಡ್ ಇಲ್ಲ, ರೈಟ್ ಯಂಡ್ ಇಲ್ಲ.

 

ಈಗ ಯಾರೂ ದೂರಲು ಆಗುವುದಿಲ್ಲ. ಎಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಆರೂವರೆ ಕೋಟಿ ಜನರ ವಿಶ್ವಾಸ ಗಳಿಸುತ್ತೇನೆ. ರೈತರು ಬದುಕಲು ಹೇಗೆ ಸಾಧ್ಯ ಎಂಬುದನ್ನು ನನ್ನ ತೋಟದಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ರಾಮನಗರ: ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿ ಕುರಿ ಸಾಕಾಣಿಕೆ ಆರಂಭ ಮಾಡಿದ್ದು, ಆ ಮೂಲಕ ಪ್ರಗತಿ ಪರ ರೈನತನಾಗಿ ಇತರರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೊಸ ಟ್ರಾಕ್ಟರ್ ಕೊಂಡು ತಮ್ಮ ಜಮೀನನ್ನು ತಾವೆ ಉಳುಮೆ ಮಾಡಿದ ವಿಡಿಯೋ ಜೊತೆಗೆ ತಮ್ಮ ಜಮೀನನ ಕೆರೆಯೊಳಗೆ, ಮೀನು ಬಿಟ್ಟ ವಿಡಿಯೋ. ಬಹಳಷ್ಟು ಜನರಿಗೆ ತಲುಪಿದ್ದು, ಮಾಜಿ ಮುಖ್ಯಮಂತ್ರಿಗಳ ಕೆಲಸಕ್ಕೆ ಬಹಳ ಮೆಚ್ಚುಗೆ ಸಿಗುವುದರ ಜೊತೆಗೆ, ಟ್ರೊಲ್ ಹಾಗಿದ್ದು ವಿಶೇಷ.

We will be happy to hear your thoughts

Leave a reply

Masala Chai Media
Logo
%d bloggers like this: