ಕನ್ನಡ ಬಿಗ್ ಬಾಸ್ 8 ಒಳಗೆ ಮೊದಲ ಮಹಿಳಾ ಕ್ಯಾಪ್ಟನ್. ಚಾನೆಲ್‌ನ ಆ ಒಂದು ಕೆಲಸ. ದಿವ್ಯ ಉರುಡಗ ಮೇಲೆ ನೆಟ್ಟಿಗರ ಆಕ್ರೋಶ.

ಕನ್ನಡದ ಬಿಗ್ ಬಾಸ್ 8 ರ ಆವೃತ್ತಿ ಎರಡನೆ ಬಾರಿ ಶುರುವಾಗಿದ್ದು, ಮೊದಲ ಬಾರಿಗಿಂತ್ತ ಎರಡನೆ ಬಾರಿ ಬಹಳಷ್ಟು ಚರ್ಚೆಯಾಗುತ್ತಿದೆ. ಜಗಳ, ಮನಸ್ಥಾಪ, ಪ್ರೀತಿ, ಸಲುಗೆ, ಅವಮಾನ, ನಿಂದನೆ‌ ಇವೆಲ್ಲವೂ ದಿನೆ ದಿನೆ ಜಾಸ್ತಿಯಾಗುತ್ತಿದೆ. ಪ್ರೇಕ್ಷಕನ ಒಲವು ಯಾರ ಮೇಲೆಂಬುದು ದೃಢ ವಾಗುತ್ತಿದೆ. ಕಾರಣ ಉಳಿದಿರುವುದ ಬೆರಳೆಣಿಕೆಯಷ್ಟು ದಿನ ಮಾತ್ರ. ಈ ಸಂಧರ್ಭದಲ್ಲಿ ದಿವ್ಯ ಉರುಡುಗ ಅವರ ಮೇಲೆ ನೆಟ್ಟಿಗರು ಕೆಂಡಮಂಡಲವಾಗಿದ್ದಾರೆ. ಕಾರಣ ಈ ಎಂಟನೆ ಆವೃತ್ತಿ ಯಲ್ಲಿ ಮಹಿಳಾ ಕ್ಯಾಪ್ಟನ್ ಯಾರು ಆಗದಿರುವುದು ಎಲ್ಲರ ಕುತೂಹಲಗಳಲ್ಲಿ ಒಂದಾಗಿತ್ತು. ಈ ನಿಟ್ಟಿನಲ್ಲಿ ಮನೆಯೊಳಗಿರು ಮಹಿಳಾ ಸ್ಪರ್ಧಿ ಗಳು ಒಂದು ಚಾಲೆಂಜ್ ಆಗು ಸ್ವೀಕರಿಸಿ ಟಾಸ್ಕ್ ನಿಭಾಯಿಸುತ್ತಿದ್ದರು. ವಾರಾಂತ್ಯದಲ್ಲಿ ಬರುವ ಸುದೀಪ್ ಅವರು ಸಹ ಈ ವಿಷಯ ಪ್ರಸ್ತಾಪ ಮಾಡಿದ್ದರು.

ಅದಾದ ಮೇಲೆ ನೀಡಿದ ಟಾಸ್ಕ್ ಅನ್ನು ದಿವ್ಯ ಉರುಡುಗ ಮತ್ತು ದಿವ್ಯ ಸುರೇಶ್ ಛಲದಿಂದ ಆಡಿದರು. ಮನೆಯ ಎಲ್ಲಾ ಸ್ಪರ್ಧಿಗಳು ಅವರಿಗೆ ಪ್ರೋತ್ಸಾಹ ನೀಡಿದರ. ಅಂತಿಮವಾಗಿ ದಿವ್ಯ ಉರುಡುಗ ಈ ಆವೃತ್ತಿಯ ಮೊದಲ ಮಹಿಳಾ ಕ್ಯಾಪ್ಟನ್ ಆದರು.ಈಗ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಕಲರ್ಸ್ ಕನ್ನಡದ ಖಾತೆಯಲ್ಲಿ ಹಂಚಲಾಗಿದ್ದ ದಿವ್ಯಾ ಉರುಡುಗ ಅವರ ಪ್ರೋಮೋವನ್ನು ಟ್ಯಾಗ್ ಮಾಡಿ, ನಾನಾ ಕಮೆಂಟ್ ಪಾಸ್ ಮಾಡಿದ್ದಾರೆ. ದಿವ್ಯಾ ಉರುಡುಗ ಅವರು ಮೊದಲ ಮುಖ್ಯಮಂತ್ರಿ ಆದವರಂತೆ ತೋರಿಸ್ತಿದ್ದೀರಾ? ಎಂದು ಕೇಳ್ತಿದ್ದಾರೆ. ದಿವ್ಯಾ ಉರುಡುಗ ಕೂಡ ಉಳಿದವರಂತೆ ಒಬ್ಬಳು ಸ್ಪರ್ಧಿ, ಅವರಿಗ್ಯಾಕೆ ಅಷ್ಟೊಂದು ಬಿಲ್ಡಪ್ ಕೊಡುತ್ತಿದ್ದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು, ಪ್ರಧಾನಿ ಮೋದಿಯವರಿಗೆ ಹೇಳಿ ಭಾರತೀಯ ರಾಷ್ಟ್ರೀಯ ಪ್ರಶಸ್ತಿ ಕೊಡುವಂತೆ ಹೇಳುತ್ತೇವೆ, ಭಾರತಕ್ಕೆ ದಿವ್ಯಾ ಅವರು ಒಳ್ಳೆಯ ಹೆಸರು ತಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

We will be happy to hear your thoughts

Leave a reply

Masala Chai Media
Logo
%d bloggers like this: