ಶ್ರೀಲಂಕಾ vs ಭಾರತ. ತಂಡದ ಆಯ್ಕೆಯೊಳಗೆ ಬೇಸರ. ದುರ್ಬಲ ಆಟಗಾರರು. ಸೋಲೋ…? ಗೆಲುವೊ…?

ಶ್ರೀಲಂಕಾ ವನ್ನು 1996 ರಲ್ಲಿ ವಿಶ್ವ ಚಾಂಪಿಯನ್ ಮಾಡಿದ ಮಾಜಿ ರಣತುರಂಗ ಮಾಧ್ಯಮ ದೊಟ್ಟಿಗೆ ಮಾತಾಡುವಾಗ ಹೀಗೆ ಹೇಳಿದ್ದಾರೆ.

ಈಗಾಗಲೆ ಆರಂಭವಾಗಬೇಕಿದ್ದ ಶ್ರೀಲಂಕಾ ಮತ್ತು ಭಾರತದ ನಡುವಿನ ಸರಣಿ ಕೋವಿಡ್ ಹಿನ್ನೆಲೆಯೊಳಗೆ ಮುಂದಕ್ಕೆ ಹೋಗಿತ್ತು. ಆದರೆ ಈಗ ತಂಡದ ಆಟಗಾರರ ಜೊತೆಗೆ ದಿನಾಂಕವನ್ನು ನಿಗಧಿಮಾಡಿದ ಬಿ ಸಿ ಸಿ ಐ ಆಯ್ಕೆಗೆ ಒಂದಷ್ಟು ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ರಣತುರಂಗ ಈ ನಿಟ್ಟಿನಲ್ಲಿ ಈ ಪಂದ್ಯವನ್ನೆ ವಿರೋಧಿಸುವುದಾಗಿ ಹೇಳಿದ್ದಾರೆ. ಅನುಭವಿ ಆಟಗಾರರನ್ನು ಇಂಗ್ಲೆಂಡ್ ಗೆ ಕಳಿಸಿ, ಹೊಸಬರನ್ನು ಶ್ರೀಲಂಕಾ ಗೆ ಕಳಿಸುತ್ತಿದ್ದಾರೆ. ಅದು ಪಬ್ಲಿಸಿಟಿ, ಮಾರ್ಕೆಟಿಂಗ್, ಮತ್ತು ಬರುವ ಹಣಕ್ಕಾಗಿ ಈ ಕ್ರಿಕೆಟ್ ನಿಯೋಜಿಸಿದ್ದು ನಮಗೆ ಮತ್ತು ನಮ್ಮ ಕ್ರಿಕೆಟ್ ಗೆ ಮಾಡುತ್ತಿರುವ ಅವಮಾನ ಇದು ಎಂದು ಹೇಳುತಿದ್ದಾರೆ.

6 ಆಟಗಾರರು ಒಂದೇ ಒಂದು ಪಂದ್ಯವನ್ನು ಆಡಿಲ್ಲ ಜುಲೈ 13 ರಿಂದ 3 ಏಕದಿನ ಮತ್ತು 3 ಟಿ 20 ಪಂದ್ಯಗಳು ಪ್ರಾರಂಭವಾಗಲಿವೆ. ಈ ಎಲ್ಲಾ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ. ಟೀಂ ಇಂಡಿಯಾದ ನಾಯಕತ್ವವನ್ನು ಹಿರಿಯ ಓಪನರ್ ಶಿಖರ್ ಧವನ್ ವಹಿಸುತ್ತಿದ್ದಾರೆ. ಧವನ್ ಅವರಲ್ಲದೆ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿ ಅನುಭವಿ ಆಟಗಾರರಾಗಿದ್ದಾರೆ. ಇವರುಗಳಲ್ಲದೆ ಉಳಿದ ಆಟಗಾರರು ಕೆಲವೇ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರಲ್ಲಿ, ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಆರು ಆಟಗಾರರಿದ್ದಾರೆ. ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

We will be happy to hear your thoughts

Leave a reply

Masala Chai Media
Logo
%d bloggers like this: