ಕೆ ಆರ್ ಎಸ್ ಡ್ಯಾಮ್ , ಮುಗಿಯದ ಕಥೆ, ಸುಮಲತಾ ವಿರುದ್ಧ ಗುಡುಗು ಮಿಂಚು, ಆರ್ ಅಶೋಕ್ ಭೇಟಿ.

ಕೆ ಆರ್ ಎಸ್ ಡ್ಯಾಮ್ ನೋಡಲು ಅದೆಷ್ಟೋ ನೋಡುಗರ ಮನಸ್ಸನ್ನು ಸೂರೆ ಮಾಡುವುದರಲ್ಲಿ ಸುಳ್ಳಲ್ಲ.‌ ನೋಡಿದರೆ ನೋಡಬೇಕು ಎನ್ನುವಷ್ಟು ಸುಂದರ ವೈಭವ ತಾಣ. ಆದರೆ ಈಗ ಅದೊಂದು ಹಸಿಬಿಸಿ ಚರ್ಚೆಗಳ, ವಾದವಿವಾದಗಳ ಗೂಡು. ಸುಮಲತಾ ಅವರು ಯಾವಾಗ ಕೆ ಆರ್ ಎಸ್ ಡ್ಯಾಮ್ ಒಳಗೆ ಬಿರುಕಿದೆ.‌ ಅಲ್ಲಿ ನಡೆಯುತ್ತಿರುವ ಗಣಿ ವ್ಯವಹಾರ ಅವ್ಯವಹಾರವಾಗಿ ನಡೆಯುತ್ತಿದೆ. ಎಂದು ಯಾವಾಗ ಹೇಳಿದರು ಅಲ್ಲಿಂದ ಜೆಡಿಎಸ್ ಶಾಸಕರು, ಅವರ ಕಾರ್ಯಕರ್ತರು ವಿರೋಧಿಸುತ್ತಲೆ ಬಂದಿದ್ದಾರೆ‌. ಈಗ ಆರ್ ಅಶೋಕ್ ಅವರು ಪ್ರತಿಕ್ರಿಯಿಸಿದ್ದಾರೆ. ಅದು ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್​​ಎಸ್​ ಡ್ಯಾಂ ಮುಖ್ಯ ಎಂದು ಸುಮಲತಾ ಅವರು ಹೇಳಿದ ಮಾತಿಗೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವರು, ಕೆಆರ್​ಎಸ್​ ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅಲ್ಲಿನ ಅಧಿಕಾರಿ ಬಿರುಕು ಇಲ್ಲ ಅಂತ ವರದಿ ಕೊಟ್ಟಿದ್ದಾರೆ.

ಇದಾದ ಬಳಿಕ ಮುಖ್ಯಮಂತ್ರಿಗಳು, ನಾನು ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಎಲ್ಲರೂ ಹೇಳಿಕೆ ನೀಡಿದ್ದೇವೆ. ನಾವೆಲ್ಲ ಹೇಳಿಕೆ ನೀಡಿದ ಮೇಲೆಯೂ ಪದೇ ಪದೇ ಬಿರುಕು ಇದೆ ಅನ್ನೋದು ಸರಿಯಲ್ಲ. ಇದರಿಂದಾಗಿ ಅಣೆಕಟ್ಟೆಯ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಆತಂಕ ಉಂಟಾಗುತ್ತೆ. ಇಷ್ಟೆಲ್ಲ ಆಗುತ್ತಿರುವಾಗ ಸರ್ಕಾರವೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್‌ಎಸ್ ಡ್ಯಾಂ ಮುಖ್ಯ ಎಂದು ಸ್ಪಷ್ಟಪಡಿಸಿರುವ ಸಚಿವರು, ನಾನೂ ಇಂದು ಮಂಡ್ಯಕ್ಕೆ ಹೋಗುತ್ತಿದ್ದೇನೆ, ಜಿಲ್ಲಾಧಿಕಾರಿ ಭೇಟಿ ಮಾಡುತ್ತೇನೆ. ಕೆಆರ್‌ಎಸ್ ಡ್ಯಾಂ, ಬೇಬಿ ಬೆಟ್ಟದ ಸುತ್ತ ಏನಾಗಿದೆ ಅಂತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು. ಇನ್ನೂ ಈ ಮಾತುಕತೆಗಳು ಮುಗಿಯುವ ಹಾಗಿಲ್ಲ. ಯಾರ್ಯಾರು ಯಾವ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ.‌ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎದು ಕಾದು ನೋಡಬೇಕು.

We will be happy to hear your thoughts

Leave a reply

Masala Chai Media
Logo
%d bloggers like this: