ರಸ್ತೆ ಅಪಘಾತದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ಗಂಭೀರ ಗಾಯ!

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಸಾವಿನ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಒಂದಷ್ಟು ಮಂದಿಗೆ ಸಹಾಯಕ್ಕೆ ಮಾಡಬೇಕಿರುವ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಲು ಓಡಾಡುತಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್​ ಅಪಘಾತಕ್ಕೀಡಾಗಿದ್ದಾರೆ. ನಿನ್ನೆ ರಾತ್ರಿ ಸ್ನೇಹಿತನ ಮನೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ, ಪೋಲ್​ವೊಂದಕ್ಕೆ ಬೇಕ್​ ಗುದ್ದಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿದ್ದಾರೆ. ಮೆದುಳಿನ ಬಲ ಭಾಗಕ್ಕೆ ಪೆಟ್ಟಾಗಿದ್ದು ಹಾಗೂ ಬಲ ತೊಡೆಯ ಮೂಳೆ ಕೂಡ ಮುರಿದಿದೆ ಎನ್ನಲಾಗ್ತಿದೆ.

ಕೊರೊನಾ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿದ್ದ ಸಂಚಾರಿ ವಿಜಯ್​, ಕೋವಿಡ್​ ನಂತರ ಮಾಡಬೇಕಾದ ಕೆಲಸಗಳ ಬಗ್ಗೆ ಒಂದಷ್ಟು ಮಾತುಕತೆ ನಡೆಸಲು ನವೀನ್​ ಅನ್ನೋ ಸ್ನೇಹಿತನ ಮನೆಗೆ ಹೋಗಿದ್ದರು. ವಿಜಯ್​ರನ್ನ ಡ್ರಾಪ್​ ಮಾಡಲು ಬೈಕ್​ ಓಡಿಸುತ್ತಿದ್ದ ನವೀನ್​ಗೂ ಪೆಟ್ಟಾಗಿದ್ದು, ಬೆನ್ನಿನ ಎಲುಬಿನಲ್ಲಿ  ಹೇರ್​ ಲೈನ್​ ಫ್ರ್ಯಾಕ್ಚರ್ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ನೆನ್ನೆ ರಾತ್ರಿಯೆ ಘಟನೆ ನಡೆದಿದ್ದು ಕೂಡಲೆ ಆಸ್ಪತ್ರೆಗೆ ಸೇರಿಸಲಾಗಿದ್ದು ಕೂಡಲೆ ಶಸ್ತ್ರ ಚಿಕಿತ್ಸೆ ಮಾಡಿರುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ ತಲೆಗೆ ಏಟಾಗಿದ್ದ ರಕ್ತಸ್ರಾವ ವಾಗಿದ್ದು ಕಾಲಿನ ತೊಡೆಯಭಾಗಕ್ಕು ಪೆಟ್ಟಾಗಿದೆ ಎಂದು ಹೇಳುತಿದ್ದಾರೆ.

ನಾನು ಅವನಲ್ಲ ಅವಳು. ಸಿನಿಮಾದ ಮೂಲಕ ಗುರುತಿಸಿಕೊಂಡ ನಟ. ಆ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡರು. ಅಲ್ಲಿಂದ ಅನೇಕ ವಿಭಿನ್ನ ಸಿನಿಮಾಗಳ ಮೂಲಕ ತಮ್ಮ ನಟನ ಕೌಶಲ್ಯ ತೋರಿರುವುದರ ಜೊತೆಗೆ. ಪ್ರಕೃತಿ ವಿಕೋಪ, ಕೊರೊನಾದಂತಹ ಸಂಧರ್ಭಗಳಲ್ಲಿ ಸಮಸ್ಯೆಗಳಲ್ಲಿ ಸಿಲುಕಿದವರ ಸಹಾಯಕ್ಕೆ ಧಾವಿಸುತಿದ್ದ ನಟ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದೆ ಕರುನಾಡಿನ ಪ್ರತಿಯೊಬ್ಬರ ಪ್ರಾರ್ಥನೆ.

We will be happy to hear your thoughts

Leave a reply

Masala Chai Media
Logo
%d bloggers like this: