ರಾಕ್ ಲೈನ್ ವೆಂಕಟೇಶ್ ಕನ್ನಡ ಸಿನಿಮ ಕ್ಷೇತ್ರವಲ್ಲದೆ ಭಾರತೀಯ ಎಲ್ಲಾ ಸಿನಿಮಾ ರಂಗದಲ್ಲಿ ಒಬ್ಬ ದೈತ್ಯ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ವ್ಯಕ್ತಿ. ಅಂಬಿಯನ್ನು ಅಣ್ಣನ ಸ್ಥಾನದಲ್ಲಿ ಕೂರಿಸಿ ಆರಾಧಿಸುವ ವ್ಯಕ್ತಿ. ಈಗ ಅಂಬರೀಶ್ ಅವರ ಧರ್ಮ ಪತ್ನಿಯಾದ ಸುಮಲತಾ ಅಂಬರೀಶ್ ಅವರ ವಿರುದ್ಧ ಕೇಳಿ ಬರುತ್ತಿರುವ ಅಪವಾದಗಳಿಗೆ ನೆನ್ನೆ ಒಂದು ಪತ್ರಿಕ ಗೋಷ್ಠಿ ಕರೆಯಲಾಗಿತ್ತು. ಸುಮಲತಾ ಅವರು ಸೇರಿದಂತೆ ಎಲ್ಲಾರು ಮಾತಾಡುವಾಗ ರಾಕ್ ಲೈನ್ ವೆಂಕಟೇಶ್ ಅವರು ಸಹ ಸಿನಿಮಾ ಶೈಲಿಯಲ್ಲಿ ತಮ್ಮನ್ನು ನಿಂಧಿಸಿದವರ ವಿರುದ್ದ ಹರಿಹಾಯ್ದರು. ಈ ಹಿನ್ನೆಲೆಯಲ್ಲಿ ಪೋಲಿಸರು ಅವರಿಗೆ ಈಗ ರಕ್ಷಣೆಯಲ್ಲಿ ತೊಡಗಿದ್ದಾರೆ.
ಮಹಾಲಕ್ಷ್ಮಿ ಲೇಔಟ್ನಲ್ಲಿರುವ ರಾಕ್ಲೈನ್ ಮನೆಯ ಎರಡು ರಸ್ತೆಗೆ ಬ್ಯಾರಿಕೇಡ್ಗಳನ್ನ ಪೊಲೀಸರು ಅಳವಡಿಸಿದ್ದಾರೆ. ಸಂಸದೆ ಸುಮಲತಾ ಆಪ್ತ ವಲಯದಲ್ಲಿ ರಾಕ್ಲೈನ್ ಗುರುತಿಸಿಕೊಂಡಿದ್ದಾರೆ. ಅಂಬರೀಶ್ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದನ್ನ ತೀವ್ರವಾಗಿ ವಿರೋಧಿಸಿದ್ದ ರಾಕ್ಲೈನ್ ವೆಂಕಟೇಶ್, ನಿನ್ನೆ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸುವ ಸಾಧ್ಯತೆಯಿಂದ ಅವರ ಮನೆಗೆ ಭದ್ರತೆಯನ್ನ ನೀಡಲಾಗಿದೆ. ಆದರೆ ಬೆಳಂಬೆಳಗೆ ಪೋಲಿಸಿನವರ ಊಹೆಯಂತ್ತೆ ಕೆಲ ಜೆಡಿಸ್ ಕಾರ್ಯಕರ್ತರು ಮನೆಯ ಮುಂದೆ ಕೂಗಾಟ ನಡೆಸಿ ಕ್ಷಮೆ ಹೇಳುವಂತೆ ಒತ್ತಡ ಹಾಕುತಿದ್ದಾರೆ.