ಛತ್ತಿಸ್ ಗಡವು ಶಿಕ್ಷಕರ ಹುದ್ದೆಗೆ ಕರೆ ನೀಡಾಲಗಿತ್ತು.ಸುಮಾರು 14850 ಕೆಲಸ ಖಾಲಿ ಇದ್ದು, ಅರ್ಜಿ ಹಾಕಲು ಹೇಳಿದ್ದರಿಂದ ಎಂ ಎಸ್ ಧೋನಿ ಅವರು ಅರ್ಜಿಯನ್ನು ಹಾಕಿದ್ದಾರೆ. ಅದರೊಳಗೆ ತಂದೆ ಹೆಸರನ್ನ ಸಚಿನ್ ತೆಂಡೂಲ್ಕರ್ ಎಂದು ನಮೂದಿಸಲಾಗಿದೆ ಎಂದು ಹೇಳಿದ್ದಾರೆ. ಎಂ ಎಸ್ ಧೋನಿ ತನ್ನ ತಂದೆ ಸಚಿನ್ ತೆಂಡೂಲ್ಕರ್ ಎಂದು ನಮೂದಿಸಿದ ಬಗ್ಗೆ ಯಾವುದೆ ರೀತಿಯ ಪುರಾವೆಗಳನ್ನು ಕೇಳದೆ ಅರ್ಜಿಯನ್ನು ಪುರಸ್ಕರಿಸಲಾಗಿದೆ.
ಎಂ.ಎಸ್.ಧೋನಿ ಹೆಸರಿನಲ್ಲಿ ಮೋಸ, ಕಾನೂನು ತನಿಖೆ ನಡೆಯಲಿದೆಯೇ?
ಶಿಕ್ಷಕ ಹುದ್ದೆಗೆ ಭರ್ತಿ ಮಾಡಿದ ನಮೂನೆಯ ಪ್ರಕಾರ, ಎಂ.ಎಸ್.ಧೋನಿ ಅವರು ದುರ್ಗ್‌ನ ಸಿಎಸ್‌ವಿಟಿಯು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ವೈರಲ್ ಆಗುತ್ತಿದೆ, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದೆ. ನಕಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಆದರೆ ಈ ಅರ್ಜಿ ನಕಲಿ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ, ಸಂದರ್ಶನಕ್ಕೆ ಅಭ್ಯರ್ಥಿಯ ಆಯ್ಕೆ ಮಾಡಿರುವುದು ಎಲ್ಲರಿಗೂ ಆಘಾತಕಾರಿಯಾಗಿ ಕಂಡುಬರುತ್ತಿದೆ. ನಿಸ್ಸಂಶಯವಾಗಿ, ಈ ಪ್ರಕರಣಗಳನ್ನು ಕಾನೂನು ಕ್ರಮದಲ್ಲಿಯೂ ತನಿಖೆ ಮಾಡಲಾಗುತ್ತದೆ. ಎಂದು ಕೆಲವರು ಮಾತಾಡಲಾತ್ತಿದೆ. ಏನೆ ಇದ್ದರು ಈ ವಿಚಾರ ಮತ್ತಷ್ಟು ಚರ್ಚೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಏನೆ ಆದರು ಸತ್ಯಾನು ಸತ್ಯತೆಗಳು ಪರಮಾರ್ಶೆಯಾಗಿ ಅರ್ಹ ಅಭ್ಯಾರ್ಥಿಗಳಿಗೆ ನ್ಯಾಯ ಸಿಗಲಿ ಎಂಬುದೆ ನಮ್ಮ ಆಶಯ.