ನವರಸ ನಾಯಕ ಎಂದ ಕೂಡಲೆ ನೆನಪಾಗುವುದು ಜಗ್ಗೇಶ್. ತಮ್ಮ ಪರಿಶ್ರಮದಿಂದ, ವಿಭಿನ್ನ ಮ್ಯಾನರಿಸಂನಿಂದಲೆ ಪೋಷಕ ಕಲಾವಿದನಿಂದ ಹೆಚ್ಚು ಜನಪ್ರಿಯತೆ ಪಡೆದು ಸ್ಟಾರ್ ಪಟ್ಟ ಪಡೆದ ನಟ ಜಗ್ಗೇಶ್.
ಆದರೆ ಅವರ ಮಕ್ಕಳು ಮಾತ್ರ ಸಿನಿಮರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುರುರಾಜ್ ಮೂರು ನಾಲ್ಕು ಸಿನಿಮಾದಲ್ಲಿ ನಟಿಸಿದರು ಅಷ್ಟೇನು ಜನ ಮನ ಗೆಲ್ಲಲು ಸಾಧ್ಯವಾಗಲಿಲ್ಲ.
ಗುರುರಾಜ್ ಕೂಡ ಸಿನಿಮ ಕ್ಷೇತ್ರದಿಂದ ದೂರ ಉಳಿದರು. ಉದ್ಯಮಿಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟು ತಂದೆಯು ಆದರು.
ವೈವಾಹಿಕ ಜೀವನದಲ್ಲಿ ಸುಖಿ ಸಂಸಾರ ನಡೆಸುತ್ತಿದ್ದ ಗುರುರಾಜ್ ಇಂದು ಚೆನೈ ಹೈವೆಯೊಳಗೆ ತಮ್ಮ ಬಿಎಂಡಬ್ಲೂ ಕಾರ್ ಒಳಗೆ ಹೋಗುತ್ತಿರುವಾಗ ಮರಕ್ಕೆ ಡಿಕ್ಕಿ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ಕುಟುಂಬ ಯಾವುದೆ ಪ್ರತಿಕ್ರಿಯೆ ನೀಡದಿದ್ದರು ಗುರುರಾಜ್ ಅವರ ಕೈಗೆ ಏಟಾಗಿದೆ ಎಂದು ತಿಳಿದು ಬಂದಿದೆ. ಏನೆ ಇರಲಿ ಆದಷ್ಟು ಬೇಗ ಗುರುರಾಜ್ ಅವರು ಗುಣಮುಖರಾಗಿ ಬರಲೆಂದು ಆಶಿಸೋಣ.
ನವರಸ ನಾಯಕ ಅವರ ಮುಖದೊಳಗೆ ಮಂದಹಾಸ ಮಾಸದಿರಲಿ ಎಂದು ಗುರುರಾಯರಲ್ಲಿ ಪ್ರಾರ್ಥಿಸೋಣ.