ಬಿಗ್ ಬಾಸ್ ಸ್ಪರ್ಧಿಗಳ ಮದ್ಯೆ ಮಾತಿನ ಜಟಪಟಿ. ಆ ಒಂದು ಮಾತಿಗೆ ಬಾರಿ ಪಶ್ಚಾತ್ತಾಪ ಪಡಬೇಕಿದೆ ಅರವಿಂದ್. ಸಿಕ್ಕಪಟ್ಟೆ ಟ್ರೊಲ್ ಆಗುತ್ತಿದ್ದಾರೆ ಆ ಸಣ್ಣ ವಿಷಯಕ್ಕೆ .

ಕೋವಿಡ್ ನಿಂದ ಆರಂಭವಾಗಿದ್ದ ಬಿಗ್ ಬಾಸ್ ರದ್ದಾಯಿತು. ಆದರೆ ನಂತರ ಮತ್ತೆ ಚಾನೆಲ್ ಮರು ಪ್ರಾರಂಭ ಮಾಡಿದೆ.
ಈ ಹಿನ್ನೆಯಲ್ಲಿ ಬೇಸರಗೊಂಡಿ‌ದ ಸ್ಪರ್ಧಿಗಳು ಮತ್ತು ವೀಕ್ಷಕರಿಗೆ ಸಂತೋಷದ ವಿಷಯವಾಗಿದೆ.
ಈಗ ಬಿಗ್ ಬಾಸ್ ಮನೆಯೊಳಗೆ ಈಗ ಸಣ್ಣದಾದ ಕಿಡಿ ಅತ್ತಿಕೊಂಡಿದೆ. ಕಾರಣ – ಬಿಗ್​ ಬಾಸ್, ಸ್ಪರ್ಧಿಗಳಿಗೆ​ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಅನುಸಾರ ಎರಡು ಟೀಂಗಳನ್ನು ಮಾಡಲಾಗಿದೆ. ಒಂದು ತಂಡಕ್ಕೆ ಅರವಿಂದ್ ಕ್ಯಾಪ್ಟನ್​ ಆದರೆ, ಮತ್ತೊಂದು ಟೀಂ ಅನ್ನು ಮಂಜು ಮುನ್ನಡೆಸುತ್ತಿದ್ದಾರೆ. ಟಾಸ್ಕ್​ ನಿಯಮದ ಅನುಸಾರ ಟಿಶ್ಯೂ ರೋಲ್​ಗಳನ್ನು ಸ್ಟೋ ರೂಂನಿಂದ ತಂದು ಗುರುತಿಸಿದ ಜಾಗದಲ್ಲಿ ಒಂದರ ಮೇಲೆ ಒಂದನ್ನು ಎತ್ತರವಾಗಿ ನಿಲ್ಲಿಸಬೇಕು. ಈ ಟಾಸ್ಕ್​ ಆಡುವಾಗ ದಾರಿಯಲ್ಲಿ ಬಿದ್ದ ಟಿಶ್ಯುರೋಲ್​ಗಳನ್ನು ನಿಧಿ ಹೆಕ್ಕಿದ್ದಾರೆ. ಇದು ಅರವಿಂದ್ ಕೋಪಕ್ಕೆ ಕಾರಣವಾಗಿದೆ.
ಈ ವಿಚಾರದಲ್ಲಿ ಮಂಜು-ಅರವಿಂದ್ ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದಾರೆ. ಆಗ ಅರವಿಂದ್, ‘ನಾನು ಕ್ಯಾಪ್ಟನ್​ ಜತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳಿ’ ಎಂದಿದ್ದಾರೆ.ನಂತರ‌ ಅರವಿಂದ್ ಎಷ್ಟು ಬಾರಿ ಹೋಗಿ ನಿಧಿ ಅವರ ಬಳಿ‌ಕ್ಷಮೆಯಾಚಿಸಿದರು ಅದು ಸಫಲವಾಗಲಿಲ್ಲ.

ನಂತರ ಅರವಿಂದ್​ ಅವರು ಹೋಗಿ ನಿಧಿಗೆ ಕ್ಷಮೆ ಕೇಳಿದ್ದಾರೆ. ಆದರೆ, ನಿಧಿ ಇದನ್ನು ನಿಧಿ ಒಪ್ಪದೆ ಇಬ್ಬರ ನಡುವೆ ಈ ವಿಚಾರಕ್ಕೆ ಮಾತಿನ ಚಕಮಕಿ ಏರ್ಪಟ್ಟಿದೆ. ‘ನೀವು ಏನು ಎಂಬುದು ನಂಗೆ ಗೊತ್ತು ಎಂದು ಪದೇಪದೇ ಹೇಳಿದ್ದೀರಿ. ಈ ಆಟದಿಂದ ನಾನು ಏನು ಎಂಬುದು ಗೊತ್ತಾಗುತ್ತದೆಯೇ? ನಾನು ಎಲ್ಲ ಬೈಗುಳಗಳನ್ನು ತೆಗೆದುಕೊಳ್ಳೋಕೆ ರೆಡಿ ಇಲ್ಲ. ನೀವು ಸಾರಿ ಎಂದು ಕೇಳುತ್ತೀರಿ. ಮತ್ತೆ ನನಗೆ ಕ್ಯಾರೆಕ್ಟರ್​ ಇಲ್ಲ ಎಂದು ಹೇಳುತ್ತೀರಿ. ನನಗೆ ಕ್ಯಾರೆಕ್ಟರ್​ ಇದೆ ಅರವಿಂದ್. ನಿಮಗೆ  ಕ್ರೀಡಾಸ್ಫೂರ್ತಿ ​ ಇಲ್ಲ. ಸೋಲನ್ನು ಒಪ್ಪಿಕೊಳ್ಳೋಕೆ ನಿನಗೆ ಆಗಲ್ಲ’ ಎಂದು ನಿಧಿ ಕೆಂಡಮಂಡಲವಾದರು.

We will be happy to hear your thoughts

Leave a reply

Masala Chai Media
Logo
%d bloggers like this: