ಕೋವಿಡ್ ನಿಂದ ಆರಂಭವಾಗಿದ್ದ ಬಿಗ್ ಬಾಸ್ ರದ್ದಾಯಿತು. ಆದರೆ ನಂತರ ಮತ್ತೆ ಚಾನೆಲ್ ಮರು ಪ್ರಾರಂಭ ಮಾಡಿದೆ.
ಈ ಹಿನ್ನೆಯಲ್ಲಿ ಬೇಸರಗೊಂಡಿದ ಸ್ಪರ್ಧಿಗಳು ಮತ್ತು ವೀಕ್ಷಕರಿಗೆ ಸಂತೋಷದ ವಿಷಯವಾಗಿದೆ.
ಈಗ ಬಿಗ್ ಬಾಸ್ ಮನೆಯೊಳಗೆ ಈಗ ಸಣ್ಣದಾದ ಕಿಡಿ ಅತ್ತಿಕೊಂಡಿದೆ. ಕಾರಣ – ಬಿಗ್ ಬಾಸ್, ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಅನುಸಾರ ಎರಡು ಟೀಂಗಳನ್ನು ಮಾಡಲಾಗಿದೆ. ಒಂದು ತಂಡಕ್ಕೆ ಅರವಿಂದ್ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂ ಅನ್ನು ಮಂಜು ಮುನ್ನಡೆಸುತ್ತಿದ್ದಾರೆ. ಟಾಸ್ಕ್ ನಿಯಮದ ಅನುಸಾರ ಟಿಶ್ಯೂ ರೋಲ್ಗಳನ್ನು ಸ್ಟೋ ರೂಂನಿಂದ ತಂದು ಗುರುತಿಸಿದ ಜಾಗದಲ್ಲಿ ಒಂದರ ಮೇಲೆ ಒಂದನ್ನು ಎತ್ತರವಾಗಿ ನಿಲ್ಲಿಸಬೇಕು. ಈ ಟಾಸ್ಕ್ ಆಡುವಾಗ ದಾರಿಯಲ್ಲಿ ಬಿದ್ದ ಟಿಶ್ಯುರೋಲ್ಗಳನ್ನು ನಿಧಿ ಹೆಕ್ಕಿದ್ದಾರೆ. ಇದು ಅರವಿಂದ್ ಕೋಪಕ್ಕೆ ಕಾರಣವಾಗಿದೆ.
ಈ ವಿಚಾರದಲ್ಲಿ ಮಂಜು-ಅರವಿಂದ್ ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದಾರೆ. ಆಗ ಅರವಿಂದ್, ‘ನಾನು ಕ್ಯಾಪ್ಟನ್ ಜತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳಿ’ ಎಂದಿದ್ದಾರೆ.ನಂತರ ಅರವಿಂದ್ ಎಷ್ಟು ಬಾರಿ ಹೋಗಿ ನಿಧಿ ಅವರ ಬಳಿಕ್ಷಮೆಯಾಚಿಸಿದರು ಅದು ಸಫಲವಾಗಲಿಲ್ಲ.
ನಂತರ ಅರವಿಂದ್ ಅವರು ಹೋಗಿ ನಿಧಿಗೆ ಕ್ಷಮೆ ಕೇಳಿದ್ದಾರೆ. ಆದರೆ, ನಿಧಿ ಇದನ್ನು ನಿಧಿ ಒಪ್ಪದೆ ಇಬ್ಬರ ನಡುವೆ ಈ ವಿಚಾರಕ್ಕೆ ಮಾತಿನ ಚಕಮಕಿ ಏರ್ಪಟ್ಟಿದೆ. ‘ನೀವು ಏನು ಎಂಬುದು ನಂಗೆ ಗೊತ್ತು ಎಂದು ಪದೇಪದೇ ಹೇಳಿದ್ದೀರಿ. ಈ ಆಟದಿಂದ ನಾನು ಏನು ಎಂಬುದು ಗೊತ್ತಾಗುತ್ತದೆಯೇ? ನಾನು ಎಲ್ಲ ಬೈಗುಳಗಳನ್ನು ತೆಗೆದುಕೊಳ್ಳೋಕೆ ರೆಡಿ ಇಲ್ಲ. ನೀವು ಸಾರಿ ಎಂದು ಕೇಳುತ್ತೀರಿ. ಮತ್ತೆ ನನಗೆ ಕ್ಯಾರೆಕ್ಟರ್ ಇಲ್ಲ ಎಂದು ಹೇಳುತ್ತೀರಿ. ನನಗೆ ಕ್ಯಾರೆಕ್ಟರ್ ಇದೆ ಅರವಿಂದ್. ನಿಮಗೆ ಕ್ರೀಡಾಸ್ಫೂರ್ತಿ ಇಲ್ಲ. ಸೋಲನ್ನು ಒಪ್ಪಿಕೊಳ್ಳೋಕೆ ನಿನಗೆ ಆಗಲ್ಲ’ ಎಂದು ನಿಧಿ ಕೆಂಡಮಂಡಲವಾದರು.