ಚಲನಚಿತ್ರವನ್ನು ಹೀಗೂ ಬಿಡುಗಡೆ ಮಾಡಬಹುದು Side Wing Kannada Movie

ಒಂದು ಕಡೆ ಲಾಕ್ ಡೌನ್, 50 ರಷ್ಟು ಸೀಟ್, ಓ, ಟಿ, ಟಿ ಒಂದಷ್ಟು ಖಾಯಿದೆ ಕಾನೂನು, ಪೈರಸಿ ನೂರಾರು ತಲೆನೂವುಗಳ ಮಧ್ಯದಲ್ಲಿ ಇಲ್ಲೊಂದು ಹೊಸ ಸಿನಿಮಾ ಹೊಸ ರೀತಿಯಾಗಿ ಪ್ರೇಕ್ಷಕರ ತಲುಪಲು ಸಜ್ಜಾಗಿದೆ.

ಹೌದು ಕನ್ನಡಕ್ಕಾಗಿ ಒಂದನ್ನು ಒತ್ತಿ, ದಯವಿಟ್ಟು ಗಮನಿಸಿ ಸಿನಿಮಾದ ನಾಯಕ ನಟ ಅವಿನಾಶ್ ಶಟಮರ್ಶನ ಅವರು‌ ನಟಿಸಿ, ನಿರ್ದೇಶಿಸಿರುವ “ಸೈಡ್ ವಿಂಗ್”  Side Wing ಎಂಬ ಹೊಸ ಬಗೆಯ, ವಿನೂತನ ಕಥೆಯ ಅಂದರವಿರುವ ಈ ಚಿತ್ರವನ್ನು ಥಿಯೇಟರ್ ನಲ್ಲು ಬಿಡುಗಡೆಯಾಗದೆ, ಓಟಿಟಿ ಯೊಳಗು ಬಿಡುಗಡೆಯಾಗದೆ ನೇರವಾಗಿ ನೋಡುಗರಿಗೆ ತಾವೇ ತಲುಪಿಸುವ ಕೆಲಸದಲ್ಲಿ‌ ತಂಡ ತೊಡಗಿದೆ.

ಥಿಯೇಟರ್ ಎಂದರೆ ಅದರೊಳಗೆ ಒಂದಷ್ಟು ಕಾನೂನುಗಳು. ಓಟಿಟಿ ಎಂದರೆ ಅದರೊಳಗಡ ಮತ್ತೊಂದಷ್ಟು ಕಾನೂನುಗಳು ಇದಾವುದರ ಪರೀಕ್ಷೆಯೆ ಬೇಡವೆಂದು ಅಗ್ನಿ ಪರೀಕ್ಷೆಗೆ ಸಿದ್ದವಾಗುತ್ತಿದೆ.
ನಿರ್ದೇಶಕರ ಮೊಬೈಲ್ ಸಂಖ್ಯೆ 9845468545 ಈ ಸಂಖ್ಯೆಗೆ ನೋಡಲು ಇಚ್ಛಿಸುವವರು ಕರೆ ಮಾಡಿದರೆ ಅವರು ಸಿನಿಮಾ ನೋಡಲು ಅವಕಾಶ ಮಾಡಿಕೊಡುತ್ತಾರೆ. ಒಂದಷ್ಟು ಸಂಶೋಧನೆಗಳ ಮೂಲಕ, ಒಂದಷ್ಟು ಸುದ್ದಿಗಳ ಗ್ರಹಿಸಿ, ಒಂದು ಹೊಸ ಬಗೆಯ ಬಿಡುಗಡೆಗೆ ನಾಂದಿಯಾಡುತ್ತಿದೆ ಸಿನಿಮಾ ತಂಡ.

ಸಿನಿಮವನ್ನು ಅಪ್ಪುವುದು, ಆಶಿರ್ವದಿಸುವುದು ಪ್ರೇಕ್ಷಕ ಮಹಾಪ್ರಭುವಿಗೆ ಬಿಟ್ಟದ್ದು. ಈಗಾಗಲೆ ಅದರ ಒಂದು ಸಣ್ಣ ತುಣುಕು ಬಿಡುಗಡೆಯಾಗಿದೆ. ಜೊತೆಗೆ ಒಂದು ಹಾಡು ಸಹ ಬಿಡುಗಡೆಗೊಂಡು ಒಂದಷ್ಟು ಜನರ ಮನಸ್ಸ ಕದಿಯುವ ಕೆಲಸದಲ್ಲಿದೆ.
ಹೊಸ ಬಗೆಯ ಕಥೆ, ಹೊಸ ಬಗೆಯ ಆಲೋಚನೆಯನ್ನು ಕನ್ನಡ ಸಿನಿ ಪ್ರೇಕ್ಷಕರು ಎಂದಿಗೂ ಕೈ ಬಿಡುವುದಿಲ್ಲ ಎಂಬುದೆ ಎಲ್ಲರ ಒಟ್ಟಾರೆಯ ನಂಭಿಕೆ. ನಂಭಿಕೆಯೆ ಬದುಕು.

 

We will be happy to hear your thoughts

Leave a reply

Masala Chai Media
Logo
%d bloggers like this: