ರಕ್ಷಿತ್ ಶೆಟ್ಟಿ‌ vs ಪಬ್ಲಿಕ್ ಟಿವಿ.‌ ಮಾಧ್ಯಮದಲ್ಲಿ ಕುಳಿತು ಬೇಕಾಬಿಟ್ಟಿ ಮಾತು. ನ್ಯೂಸ್ ಚಾನಲ್ ಗೆ ಓಪನ್ ವಾರ್ನಿಂಗ್ ನೀಡಿದ ಸಿಂಪಲ್ ಸ್ಟಾರ್.

ಸಿಂಪಲ್ಲಗೊಂದು‌ ಲವ್ ಸ್ಟೋರಿ ಸಿನಿಮಾದ ಮೂಲಕ ಬೆಳ್ಳಿ ತೆರೆಯೊಳಗೆ ರಾರಾಜಿಸಿದ ನಟ ರಕ್ಷಿತ್‌ಶೆಟ್ಟಿ. ನಟನಾಗಿ , ನಿರ್ದೇಶಕ ನಾಗಿ, ನಿರ್ಮಾಪಕನಾಗಿ, ಕನ್ನಡ ಚಿತ್ರರಂಗದಲ್ಲಿ ತನ್ನದೆ ಛಾಪು ಮೂಡಿಸಿದ ನಟ ಎಂದರೆ ತಪ್ಪಾಗಲಾರದು. ರಕ್ಷಿತ್ ಮಾಡಿರುವ ಕೆಲವು ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲೆ ಸುದ್ದಿ ಮಾಡಿವೆ.

ಹೀಗಿದ್ದರು ನಮ್ಮ ಕನ್ನಡದ ನಟನನ್ನು, ಕನ್ನಡ ವಾಹಿನಿಯೊಂದು ಕಾಲು ಎಳೆಯುವ ಕಾಯಕದಲ್ಲಿ ತೊಡಗಿದೆ . ರಕ್ಷಿತ್ ಶೆಟ್ಟಿ ಈ ಹಿಂದೆ ಮಾಡಿದ ಸಿನಿಮಾ ಅವನೇ ಶ್ರೀಮಾನ್‌ ನಾರಾಯಣ ಸಿನಿಮಾ ಸೋತು ನಿರ್ಮಾಪಕರನ್ನು ಮುಳುಗಿಸಿದ. ಅವನ ವರ್ತನೆ ಸಹಿಸದೆ ಮಧ್ಯ ರಾತ್ರಿಯಲ್ಲಿ ಸೋಡ ಚೀಟಿ ನೀಡಿ ಬಾಲಿವುಡ್, ಕಾಲಿವುಡ್, ಟಾಲಿವುಡ್ ಒಳಗೆ ಮಿಂಚುತ್ತಿರುವ ನಟಿ, ಈತ ಸೋತು ಗಲ್ಲಿಗಳಲ್ಲಿ ಅಲೆಯುತಿದ್ದಾನೆ. ಇದಕ್ಕೆಲ್ಲ ಕಾರಣ ಅವನ ವರ್ತನೆ, ಅಹಂಕಾರ ಎಂದೆಲ್ಲ ಜರಿದು ತೇಜೋವಧೆಗೆ ಮುಂದಾಗಿದೆ.

ಇದು ಬಹಳ ದಿನದಿಂದ ನಡೆದು ಬರುತಿದ್ದು ರಕ್ಷಿತ್ ಶೆಟ್ಟಿ ಎಲ್ಲವನ್ನೂ ಸಹಿಸಿ ಸುಮ್ಮನಿದ್ದರು. ಆದರೆ ಈಗ ಒಂದು ಪತ್ರ ಬರೆದು ಜುಲೈ ಹನ್ನೊಂದನೇ ತಾರಿಖು ನಾನೇನೆಂಬುದ ತೋರಿಸುವೆ ಎಂದಿದ್ದಾರೆ.

ವಿಷಯಗಳು ಏನೆ ಇರಲಿ ನಮ್ಮ ನಮ್ಮ ಸ್ವಾರ್ಥಕ್ಕೆ ಪವಿತ್ರವಾದ ಮಾಧ್ಯಮ ಗಳನ್ನು ಬಳಸುವುದು ತಪ್ಪು.

We will be happy to hear your thoughts

Leave a reply

Masala Chai Media
Logo
%d bloggers like this: