ನಾಡಿನಾದ್ಯಂತ ಕಾನೂನುಗಳನ್ನು ಎಷ್ಟೆ ಕಟ್ಟುನಿಟ್ಟುಗೊಳಿಸುತ್ತಾರೊ ಅಷ್ಟೇ ಕಾನೂನಿನ ಉಲ್ಲಂಘನೆ ನಡೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಒಂದು ಯೋಜನೆಗೆ ಮುಂದಾಗಿದೆ. ಅದುವೆ ಕ್ಯಾಷ್ ಲೆಸ್ ದಂಡ. ಹೌದು
ಕರೊನಾ ಸಮಸ್ಯೆಯೂ ಇರುವುದರಿಂದ ಟೆಲಿಬ್ರಹ್ಮ ಸರ್ವಿಸಸ್ ಅವರ ಸಹಯೋಗದೊಂದಿಗೆ, ನಗದು ರಹಿತ ದಂಡ ಪಾವತಿಗೆ ಪೊಲಿಸ್ ಇಲಾಖೆ ಈ ಮಾದರಿಯನ್ನು ಕಂಡುಕೊಂಡಿದೆ. ಸಾಫ್ಟ್ವೇರ್ ವೆಬ್ಸೈಟ್, ಪಿಡಿಎ ಮಷೀನ್ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಗದು ರಹಿತ ದಂಡ ಪಾವತಿಗೆ ರೂಪಿಸಿದ ಈ ಹೊಸ ಮಾರ್ಗದಿಂದಾಗಿ ಇನ್ನು ಮುಂದೆ ದಂಡ ಕಟ್ಟದೆ ತಪ್ಪಿಸುವುದು ಕಡಿಮೆಯಾಗಲಿದೆ.
ಕಾರಣ ಹೇಳುವುದ. ಎ.ಟಿ.ಎಮ್ ಮಷಿನ್ ಹುಡುಕುವುದಕ್ಕೆ ಬ್ರೇಕ್ ಬಿದ್ದಿದೆ.”ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಿದರೆ, ನಗದು ಹಣವಿಲ್ಲ ಎಂದು ಹೇಳಿ ನುಣುಚಿಕೊಳ್ಳುವ ಸಂದರ್ಭ ಇನ್ನು ಮುಂದೆ ಬರುವುದಿಲ್ಲ. ಹೌದು. ಬೆಂಗಳೂರಿನಲ್ಲಿ ಇಂದು ಪೇಟಿಎಂ ಮೂಲಕ ದಂಡ )ಪಾವತಿ ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗಿದೆ.”
ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಈ ನೂತನ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದಾರೆ.