ಕಿರಕ್ ಪಾರ್ಟಿಯ “ಕಿರಿಕ್”. ಮಾತುಕತೆಯಲ್ಲಿ “ಲಹರಿ” ಸುಖಂತ್ಯವಾಯಿತೆ. “ಮಧ್ಯ ರಾತ್ರಿಯ” ಹಾಡು? ವೇಣು ಅವರ ಮಾತು.

ಕಿರಿಕ್ ಪಾರ್ಟಿ ಬಿಡುಗಡೆಗೊಂಡು ಬಹಳ ಜನಪ್ರಿಯ ಪಡೆದ ಸಿನಿಮಾ .ರಕ್ಷಿತ್ ಶೆಟ್ಟಿ ನಾಯಕನಾದರೆ, ರಿಷಭ್ ಶೆಟ್ಟಿ ನಿರ್ದೇಶಕರ ಜವಬ್ದಾರಿ ಹೊತ್ತಿದ್ದ ಸಿನಿಮಾ. ಸಿನಿಮ ಬಿಡುಗಡೆಗೊಂಡು ಒಳ್ಳೆಯ ಅಭಿಪ್ರಾಯ ಒಂದು ಕಡೆಯಾದರೆ? ಈ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಒಂದು ಹಾಡನ್ನು ರಿಮಿಕ್ಸ್ ಆಗಿ ಬಳಸಲಾಗಿದೆ ಎಂದು, ಈ ವಿಚಾರ ಕೋರ್ಟ್ ಮೆಟ್ಟಿಲೇರಿತು. ಈ ವಿಚಾರವಾಗಿ ರಕ್ಷಿತ್ ಶೆಟ್ಟಿಗೆ ಕೋರ್ಟ್ ಗೆ ಹಾಜರಾಗಲು ತಾಕೀತು ಸಹ ಮಾಡಿತ್ತು. ಆದರೆ ಈಗ, ಲಹರಿ ವೇಣು ಮತ್ತು ರಕ್ಷಿತ್ ಶೆಟ್ಟಿ ಅವರು ಎರಡು ನಿಮಿಷದ ಒಂದು ಮಾತುಕಥೆಯೊಳಗೆ ಮೂರು ವರ್ಷದ ಜಗಳ, ಜರ್ಚೆ, ಊಹೆ ಪೋಹೆ ಎಲ್ಲವೂ ಸುಖಾಂತ್ಯವಾಗಿದೆ.

ಸಿನಿಮಾ ಒಂದು ದೇವಸ್ಥಾನವಿದ್ದಂತ್ತೆ. ಅಲ್ಲಿ ಸರಸ್ವತಿ ಇದ್ದಾಳೆ. ಪೂಜಾರಿಗಳು ಇದ್ದಾರೆ. ನಾವು ಭಕ್ತಾದಿಗಳು ಭಯ, ಭಕ್ತಿಯಿಂದ ಬರಬೇಕು. ನಮ್ಮ ಮದ್ಯೆ ಈಗ ಯಾವ ಮನಸ್ಥಾಪವು ಇಲ್ಲ.ಎಂದು ಲಹರಿ ವೇಣು ಅವರು ಖಾಸಗಿ ಸುದ್ದಿ ವಾಹಿನಿಯೊಳಗೆ ಹೇಳಿದ್ದಾರೆ. ಏನೆ ಇರಲಿ “ಕೂಡಿ ಬಾಳಿದರೆ ಸ್ವರ್ಗ ಸುಖ” ಎಂಬ ನುಡಿ ಮುತ್ತಿನಂತೆ ದೈತ್ಯ ಪ್ರತಿಭೆಗಳು ಒಂದಾದರೆ ಕನ್ನಡ ಸಿನಿಮಾಗೆ ಒಂದು ದೊಡ್ಡ ಕೀರ್ತಿ ಪತಾಕೆ.

We will be happy to hear your thoughts

Leave a reply

Masala Chai Media
Logo
%d bloggers like this: