ಸಿನಿಮಾ ಅಂದರೆ ಹಾಗೆ ಅದೊಂದು ಬಣ್ಣದ ಪ್ರಪಂಚ. ಕ್ಷಣಕ್ಕೊಂದು ಮಾತು, ಕ್ಷಣಕೊಂದು ವೇಷ. ಎರಡು ಗಂಟೆ ಪರದೆ ಮೇಲೆ ಸದ್ಗುಣ ಸಂಪನ್ನರಾಗಿ ಮಿಂಚುವವರು, ಡಜನ್ ಗಟ್ಟಲೆ ನ್ಯಾಯ, ನೀತಿ, ಹೆಣ್ಣು, ಪ್ರೀತಿ ಎಂದು ಡೈಲಾಗ್ ಒಡೆಯುವರು. ಅವರನ್ನು ತಮ್ಮ ನಾಯಕನಾಗಿಸಿಕೊಂಡು ಅವರನ್ನು ಅನುಸರಿಸುವ ಎಷ್ಟೊ ಮಂದಿ ಅಭಿಮಾನಿಗಳು ಇದ್ದಾರೆ. ಆದರೆ ನಮಗೆ ಕಾಣುವ ವ್ಯಕ್ತಿಗಳೆ ಬೇರೆ, ಕಾಣದೆ ಇರುವ ವ್ಯಕ್ತಿತ್ವ ಗಳೆ ಬೇರೆ.
ಅದರಂತ್ತೆ ನಟ, ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ವಿಚ್ಚೇದನ ಕ್ಕೆ ಮುಂದಾಗಿದ್ದಾರೆ. ಹದಿನೈದು ವರ್ಷ ಸುಖಿ ದಾಂಪತ್ಯ ಜೀವನ ನಡೆಸಿರುವ ನಾವು ಎಲ್ಲಾ ಸುಖ, ದುಃಖದಲ್ಲು ಸಮಾನವಾಗಿ ಪಾಲುದಾರರಾಗಿದ್ದೇವೆ. ಪ್ರತಿಯೊಂದು ಹಂತದಲ್ಲೂ ಇಬ್ಬರು ಕೂತು ಯೋಚಿಸಿ ತೀರ್ಮಾನಕ್ಕೆ ಬರುತಿದ್ದೆವು ಅದರಂತೆ ನಾವು ನಮ್ಮ ಗೌರವ ಮತ್ತು ಈಗ ನಾವು ಒಪ್ಪಿಗೆಯ ಮೇರೆಗೆ ಪ್ರತ್ಯೇಕವಾಗುತ್ತಿದ್ದು ವಿಚ್ಛೇದನದ ಆನಂತರವೂ ಒಬ್ಬರಿಗೊಬ್ಬರು ವಿಸ್ತರಿಸಿದ ಕುಟುಂಬವಾಗಿ ಮುಂದುವರೆಯಲಿದ್ದೇವೆ.
ನಮ್ಮ ಪುತ್ರ ಆಜಾದ್ಗೆ ನಾವು ಪೋಷಕರಾಗಿಯೇ ಉಳಿದು ಜೊತೆಯಾಗಿ ಪೋಷಿಸಿ ಬೆಳೆಸಲಿದ್ದೇವೆ. ಸಿನಿಮಾಗಳಲ್ಲಿ, ಪಾನಿ ಫೌಂಡೇಶನ್ನಲ್ಲಿ, ಇತರೆ ಪ್ರಾಜೆಕ್ಟ್ಗಳಲ್ಲಿ ಜೊತೆಯಾಗಿಯೇ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ. ನಮ್ಮ ಕುಟುಂಬ, ಸ್ನೇಹಿತರಿಗೆ ಮತ್ತು ಅವರ ನಿರಂತರ ಬೆಂಬಲಕ್ಕೆ ಹಾಗೂ ಈ ಹೆಜ್ಜೆ ಮುಂದಿಡಲು ಜೊತೆಯಾದವರಿಗೆ ಬಿಗ್ ಥ್ಯಾಂಕ್ಸ್ ಹೇಳುತ್ತೇವೆ. ನಮ್ಮ ಒಳಿತು ಬಯಸುವವರಿಗೆ ನಾವು ನಮಗೆ ಶುಭ ಹಾರೈಸುವಂತೆ ಮತ್ತು ಆಶೀರ್ವದಿಸುವವರು ಮನವಿ ಮಾಡುತ್ತೇವೆ. ಮತ್ತು ಈ ಡಿವೋರ್ಸ್ ಅಂತ್ಯವಾಗಿರದೇ ಒಂದು ಹೊಸ ಪಯಣದ ಪ್ರಾರಂಭವಾಗಿರಲಿದೆ ಎಂಬ ನಂಬಿಕೆಯಿದೆ.- ಆಮೀರ್ ಖಾನ್ & ಕಿರಣ್ ರಾವ್