ದೇಶದಲ್ಲಿ ಯಾವಾಗಲೂ ಮೂರು ರೀತಿಯ ಚಿಂತನೆಗಳು ಸದಾ ನಡೆಯುತ್ತಲೆ ಇರುತ್ತವೆ. ಒಂದು ಪರವಾಗಿರುವುದು, ಇನ್ನೊಂದು ವಿರೋಧವಾಗಿ ಇರುವುದು. ಮತ್ತೊಂದು ತಟಸ್ಥವಾಗಿರುವುದು. ಈ ಮೂರು ಚಿಂತನೆಗಳು ಮೂರು ವ್ಯಕ್ತಿತ್ವಗಳನ್ನು ಅವರು ಆರಿಸಿಕೊಳ್ಳುವ ಚಿಂತನೆಯ ಮೇಲೆ ನಿಂತಿರುತ್ತದೆ. ಈಗ ನಮಗೆಲ್ಲರಿಗೂ ಈಗಾಗಲೆ ತಿಳಿದಿರುವಂತೆ ಹಮೀರ್ ಖಾನ್ ತನ್ನ ಇತ್ತೀಚೆಗೆ ತಮ್ಮ ಮಡದಿ ಕಿರಣ್ ರಾವ್ ಹೇಳಿಕೆ ಬಿಡುಗಡೆ ಮಾಡಿ ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ಹೇಳಿದ್ದರು. ಆ ಸುದ್ದಿ ಬರುತ್ತಿದ್ದಾಗಲೆ ಅನೇಕ ಜನರ ಟೀಕೆಗೆ ಕಾರಣವಾಯಿತು. ಮತ್ತಷ್ಟು ಜನ ಅಸಹ್ಯ ಪಟ್ಟುಕೊಂಡರು ಹಮೀರ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈಗ ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ನಟ ಅಮೀರ್ ಖಾನ್ ಅವರಂತಹ ಜನ ಹೊಣೆಗಾರರು ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಾರಣ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೀರ್ ಖಾನ್ ಇಬ್ಬರು ಮಕ್ಕಳು ಇರುವ ಮೊದಲ ಪತ್ನಿ ರೀನಾ ದತ್ತಾರನ್ನು ತೊರೆದರು. ಬಳಿಕ ಒಂದು ಮಗುವಿನೊಂದಿಗೆ ಕಿರಣ್ ರಾವ್ ಅವರನ್ನು ತೊರೆದರು. ಈಗ ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಪತ್ನಿಯನ್ನು ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜನ ಸಾಮನ್ಯರು ಮುಂದುವರೆದ ಭಾಗವಾಗಿ, ಹೀಗೆ ತಮ್ಮ ತಮ್ಮ ಹಿತಸಕ್ತಿಗೆ, ಆಮಿಷಕ್ಕೆ, ದೇಶದಲ್ಲಿ ಮದಲುವೆಗಳು, ಮಕ್ಕಳು, ವಿಚ್ಛೇದನ ನಡೆಯುತ್ತ ಹೋದರೆ ಜನಸಂಖ್ಯೆ ಸ್ಪೂಟವಾಗುತ್ತದೆ ಎಂದು ಗಲ್ಲಿ ಗಲ್ಲಿ ಮಾತಾಗುತ್ತಿದೆ.