ಕೊರೊನಾ ಅಲೆಯಲ್ಲು ದಾಖಲೆ. ಎಲ್ಲರ ಚಿತ್ತ ತನ್ನತ್ತ ಸೆಳೆದ ವಿದ್ಯಾರ್ಥಿಗಳು. ಒಂದು ಕೆಲಸ.‌‌ 1.5 ಕೋಟಿ ಸಂಬಳ. ಪಿ ಇ ಎಸ್ ವಿದ್ಯಾರ್ಥಿಗಳು.

ಕೊರೊನಾ ಮಾರಿ‌ ಬಂದಾಗಿನಿಂದ ಜನರ ಜೇಬು ಬರಿದಾಗಿದೆ. ಜೀವಕ್ಕೆ ಹೆದರಿದವರು ಕೆಲಸ ಬಿಟ್ಟು ಊರು ಸೇರಿದ್ದಾರೆ. ಆದರೆ ಹಸಿವು ಮಾತ್ರ ಯಾರನ್ನು ಬಿಡದೆ‌ ಕಾಡುತ್ತಿದೆ‌. ಒಂದು ಕಡೆ ಏರುತ್ತಿರುವ ಬೆಲೆ. ಸಂಬಳವ ಕೇಳಲು ಆಗದೆ ಕೊಟ್ಟಷ್ಟಕ್ಕೆ ತೃಪ್ತಿ ಪಡುವ ಕಾಯಕ. ಹೀಗಿರುವಾಗ ಇತ್ತ ಬೆಳಗಾವಿಯಲ್ಲಿ ವಿದ್ಯಾರ್ಥಿಗಳು ಎಲ್ಲವನ್ನು ಮೀರಿ‌ ಬದುಕನ್ನು ಕಟ್ಟಿಕೊಳ್ಳಲು ಹೊರಟಿದ್ದಾರೆ. ಕೊರೋನಾ ಸಂಕಷ್ಟದಲ್ಲೂ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಹತ್ತರ ಸಾಧನೆ ಮಾಡಿದ್ದಾರೆ. ಕ್ಯಾಂಪಸ್‌ ಸಂದರ್ಶನದಲ್ಲಿ ಕ್ಯಾಂಪಸ್‌ ಸಂದರ್ಶನಲ್ಲಿ ವಿವಿಯ ವಿವಿಧ ಕೋರ್ಸ್‌ಗಳ 1740 ವಿದ್ಯಾರ್ಥಿಗಳು ಉದ್ಯೊಗ ಮತ್ತು ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಬಹುತೇಕರು 87 ಸಾವಿರದಿಂದ 1.5  ಕೋಟಿ ಸಂಬಳದ ಉದ್ಯೋಗವನ್ನ ಗಿಟ್ಟಿಸಿಕೊಂಡಿದ್ದಾರೆ.

 

ಸಾರಂಗ ರವೀಂದ್ರ ಎಂಬ ವಿದ್ಯಾರ್ಥಿಗಳು ಬ್ರಿಟನ್ ಕಾನ್ ಪ್ಲೂಯೆಂಟ್ ಕಂಪನಿಯ ವಾರ್ಷಿಕ 1.5 ಕೋಟಿ ವೇತನದ ಪ್ಯಾಕೇಜ್‌ನ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಜೀವನಾ ಹೆಗಡೆ ಪ್ರತಿಷ್ಠಿತ ಗೂಗಲ್‌ ಕಂಪನಿಯಲ್ಲಿ ಕ್ಲೌಡ್‌ ಕಸ್ಟಮರ್‌ ಎಂಜಿನಿಯರ್ ಹುದ್ದೆಗೆ ನೇಮಕವಾಗುದ್ದಾರೆ. ಏನೆ ಇರಲಿ ಕೆಲಸಗಳು ಸೃಷ್ಟಿಯಾದಷ್ಟು ದೇಶ ಮತ್ತು ದೇಶದೊಳಗಿನ ಜನರಿಗೆ ನೆಮ್ಮದಿ ಮತ್ತು ಅಭಿವೃದ್ಧಿ ಪೂರಕವಾಗಿರುತ್ತದೆ. ಮತ್ತಷ್ಟು ಕೆಲಸಗಳ ಮತ್ತಷ್ಟು ಜನರಿಗೆ ಸಿಗಲಿ ಎಂಬುದಷ್ಟೆ ನಮ್ಮ ಆಶಯ.

We will be happy to hear your thoughts

Leave a reply

Masala Chai Media
Logo
%d bloggers like this: