ಕೆ ಎಸ್ ಆರ್ ಟಿ ಸಿ ಎಂದ ಕೂಡಲೆ ನೆನಪಾಗುವುದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ. ಆದರೆ ಇದೆ ಹೆಸರಲ್ಲಿ ಕೇರಳ ರಾಜ್ಯ ಸಾರಿಗೆಯು ನಡೆಯುತಿದೆ ಎಂಬುದೆ ವಿಶೇಷ. ಆದರೆ ಈಗ ಕೆ ಎಸ್ ಆರ್ ಟಿಸಿ ನಮ್ಮೆಲ್ಲರಿಗು ಅಳಿದುಳಿಯುವ ಬರಿಯ ನೆನಪಾಗುವುದಕ್ಕೆ ಅಣಿಯಾಗುತ್ತಿದೆ. ಇದಕ್ಕೆ ಬೇಕಾದ ಸಿದ್ದತೆಗಳನ್ನು ಕೇರಳ ಸರ್ಕಾರ ಮಾಡಿಕೊಳ್ಳುತ್ತಿದೆ. 26 ವರ್ಷಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಕರ್ನಾಟಕ ತನ್ನ ರೆಕ್ಕೆಯನ್ನೆ ಕಳೆದುಕೊಳ್ಳುವ ಸ್ಥಿತಿ ತಲುಪಲಿದೆ.
ಕಾರಣ:
ಕರ್ನಾಟಕದ ಕೆ ಎಸ್ ಆರ್ ಟಿ ಸಿ ಬಗ್ಗೆ ಕೇರಳದ ಬೇಡಿಕೆ. ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳು ಕೆ ಎಸ್ ಆರ್ ಟಿ ಸಿ ಹೆಸರಲ್ಲಿ ರಾಜ್ಯ ಸಾರಿಗೆ ನೊಂದಾಯಿಸಿದ್ದು ಈಗ ಗೊಂದಲಕ್ಕೆ ಕಾರಣವಾಗಿದೆ. ಅದಕ್ಕಾಗಿ 2013 ರಲ್ಲೆ ಕರ್ನಾಟಕ ರಾಜ್ಯ ಸರ್ಕಾರ ಟ್ರೇಡ್ ಮಾರ್ಕ್ ನೊಂದಣಿಯೊಳಗೆ ಅರ್ಜಿ ಸಲ್ಲಿಸಿತ್ತು, ಆದರೆ ಈಗ ಕೇರಳ ಸರ್ಕಾರ ಅದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದೆ.
ಕರ್ನಾಟಕವು ಕರ್ನಾಟಕ ಎಂದು ನಾಮಕರಣಗೊಂಡಿದೆ 1973 ರಲ್ಲಿ. ಅದಕ್ಕು ಮುಂಚೆ ಕರ್ನಾಟಕವನ್ನು ಹಳೆ ಮೈಸೂರು ಪ್ರಾಂತ್ಯ ಎಂದು ಕರೆಯುತ್ತಿದ್ದರು. ಹಾಗಾಗಿ ಕೆ ಎಸ್ ಆರ್ ಟಿ ಸಿ ಎಂಬ ಹೆಸರನ್ನು ಕರ್ನಾಟಕಕ್ಕೆ ನೀಡಲು ಸಾಧ್ಯವಿಲ್ಲ ಎಂದು, ಕೇರಳದ ಹೇಳಿಕೆ.
ಈ ಹೇಳಿಕೆಯನ್ನು ಆಲಿಸಿರುವ ಕರ್ನಾಟಕದ ಕೆ ಎಸ್ ಆರ್ ಟಿ ಸಿ ಎಂಡಿ ಶಿವಯೋಗಿ ಕಳಸದ ಅವರು ಈ ಹೇಳಿಕೆಯನ್ನು ವಿರೋಧಿಸಿ.
ಅವರ ಹೇಳಿಕೆಯ ಪ್ರತಿ ಇನ್ನೂ ನಮಗೆ ಕೈಗೆ ದೊರೆತಿಲ್ಲ. ದೊರೆತ ಕೂಡಲೆ ಕಾನೂನಿನ ಮೂಲಕ ಹೋರಾಡುತ್ತೇವೆ. ಕೆ ಎಸ್ ಆರ್ ಟಿ ಸಿ ಯು ಕರ್ನಾಟಕದ ಕೈ ಬಿಟ್ಟು ಹೊಗಂದಂತ್ತೆ ತಡೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.