‘ಕಾಂತಾರ’ದ ಯಶಸ್ಸಿನ ನಂತರ, Rishab shetty ಮತ್ತು ಅವರ ತಂಡವು ಕಾಂತಾರದ ಮುಂದಿನ ಭಾಗವನ್ನು ಪ್ರಾರಂಭಿಸುವ ಮೊದಲು ದೈವದ ಆಶೀರ್ವಾದ ಪಡೆಯಲು ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಮೊದಲ ಚಿತ್ರೀಕರಣದ ಸಮಯದಲ್ಲಿಅವರು ಮಾಡಿದಂತೆಯೇ, ‘Kaantara 2’ ಗೆ ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ದೈವದ ಅನುಮತಿಯನ್ನು ಪಡೆಯಲು ರಿಷಬ್ ಶೆಟ್ಟಿ ಬಯಸಿದ್ದರು.
ದೈವದ ಬಳಿ ಕೋರಿಕೆ:
ಮಂಗಳೂರಿನ ಹೊರವಲಯದಲ್ಲಿ ನಡೆದ ಭೂತಕೋಲ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ನಿರ್ಮಾಪಕ ವಿಜಯ್ ಕಿರಗಂದೂರು ಭಾಗವಹಿಸಿದ್ದರು. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗರ ಸಮ್ಮುಖದಲ್ಲಿ ಕೋಲ ನಡೆಯಿತು. ‘ಕಾಂತಾರ’ದ ಯಶಸ್ಸಿನ ನಂತರ ಇದೀಗ ‘Kaantara 2’ ಸಿನಿಮಾದ ಮಾತುಕತೆ ಶುರುವಾಗಿದ್ದು, ‘ಕಾಂತಾರ 2’ ಸಿನಿಮಾ ಮಾಡಬಹುದೇ ಎಂದು ರಿಷಬ್ ಶೆಟ್ಟಿ, ನಿರ್ಮಾಪಕ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡಿದೆ.
ಎಚ್ಚರಿಕೆ ನೀಡಿದ ದೈವ:
ಪಂಜುರ್ಲಿ ದೈವ ಕಾಂತಾರ 2 ಮಾಡಲು ಅನುಮತಿ ನೀಡಿದ್ದರೂ ಕೆಲವು ಎಚ್ಚರಿಕೆಯನ್ನು ನೀಡಿದೆ. ದೈವ ನೀಡಿದ ಕೆಲವು ಮುಖ್ಯವಾದ ಸಲಹೆ ಸೂಚನೆಗಳನ್ನು Rishab shetty ಅವರು ಅತ್ಯಂತ ಶ್ರದ್ಧೆಯಿಂದ ಕೇಳಿದ್ದಾರೆ.
ದೈವದಿಂದ ಅನುಮತಿ:
ದೈವದ ಬಳಿ ಅನುಮತಿ ಕೇಳಿದಾಗ ಮೊದಲ ಬಾರಿ ಕಾಂತಾರ ಮಾಡುವಾಗ ಹತ್ತು ಬಾರಿ ಯೋಚಿಸಿದ್ದೀರಿ. ಈ ಬಾರಿ ಮಾಡಬೇಕಾದರೆ ನೂರು ಬಾರಿ ಯೋಚನೆ ಮಾಡಿ. ಅದೇ ಶ್ರದ್ದೆ, ಅದೇ ಶುಚಿತ್ವವನ್ನು ಕಾಪಾಡಿಕೊಂಡು ಮುಂದುವರೆಯಿರಿ ನಿಮ್ಮ ಪ್ರಯತ್ನಕ್ಕೆ ಯಾವಾಗಲೂ ಜಯ ಸಿಗುವ ಹಾಗೆ ಮಾಡುತ್ತೇನೆ ಎಂದು ದೈವ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ.
ದೈವದಿಂದ ಅನುಮತಿ ಸಿಕ್ಕಿದ ಕೂಡಲೇ ‘Kaantara 2’ ಚಿತ್ರದ ನಿರ್ಮಾಣಕ್ಕೆ ಮಾಡಿದ್ದ ಯೋಜನೆಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದಾರೆ. ಚಿತ್ರದಲ್ಲಿ ನಟಿಸುವ ಕೆಲವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಮಳೆಗಾಲದ ಸಮಯದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಗಳಿವೆ.