ಯಾವಗ 2020 ಆರಂಭದ ಜೊತೆಗೆ ಈ ಕೋವಿಡ್19 ಇಡೀ ಪ್ರಪಂಚದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿತು. ಅದರ ಫಲವಾಗಿ ದೇಶದ ಪ್ರತಿ ಮನೆ ಮನೆಯಲ್ಲೂ ಸಾವುಗಳು. ಎಲ್ಲೆಡೆ ಸೂತಕದ ಛಾಯೆ.
ನಮ್ಮ ವಿಜ್ಞಾನಿಗಳು ಇದರಿಂದ ನಮ್ಮನ್ನು ವಿಮುಕ್ತಿಗೊಳಿಸಲು ಅನೇಕ ಸಂಶೋಧನೆಯ ಮೂಲಕ ವ್ಯಾಕ್ಸಿನ್ ಕಂಡು ಹಿಡಿಯುವ ಮೂಲಕ ಕೊರೊನಾಗೆ ಕೊಂಚಮಟ್ಟಿಗೆ ಬ್ರೇಕ್ ಹಾಕಲಾಗಿದೆ. ಆದರೆ ಕೆಲವು ಸುಳ್ಳು ಪ್ರಚಾರಗಳಿಂದ ಜನ ವ್ಯಾಕ್ಸಿನ್ ಗೆ ಹೆದರಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಲ್ಲಿ ಹಿಂದೇಟು ಹಾಕುತಿದ್ದಾರೆ. ಹೀಗಿರುವಾಗ ವಿಶ್ವ ಸಂಸ್ಥೆಯ ಆರೋಗ್ಯ ಸಮಿತಿಯ ಮುಖ್ಯಸ್ಥರಿಂದ ಒಂದು ಹೊಸ ಸುದ್ದಿ ಹೊರಬಿದ್ದಿದೆ.
ಕೊರೊನಾ ದ ಎರಡನೆ ಅಲೆಯು ಬಹಳ ಆತಂಕವನ್ನು ನೀಡಿರುವುದರಿಂದ ಅದನ್ನು ತಡೆಯಲು ವ್ಯಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ಅನ್ನು ನೀಡಲಾಗುತ್ತಿದ್ದು ಇದು ಮೂರನೆ ಅಲೆಯನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.ಮೂರನೆ ಅಲೆ ಡೆಲ್ಟ ವೈರಸ್ ಎರಡನೆ ಅಲೆಗಿಂತ ಹೆಚ್ಚು ಅಪಾಯಕಾರಿ ಯಾಗಿದ್ದು ಆದರೆ ಅದನ್ನು ತಡೆಯು ರೋಗ ನಿರೋಧಕ ಶಕ್ತಿ ಈ ಕೋವಿಡ್ ಶೀಲ್ಡ್ ಗೆ ಇದೆ.
ಹಾಗಾಗಿ ಹೆದರುವ ಭಯವಿಲ್ಲ. ಇನ್ನು ಯಾರು ಯಾರು ಈ ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲವೊ ಅವರೆಲ್ಲ ಬಹು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತ್ತೆ ತಿಳಿಸಿದೆ. ಅನುಮಾನ ಎಲ್ಲಾ ವೈರಸ್ ಗಿಂತ ಬಹು ಅಪಾಯಕಾರಿಯಾದ್ದು. ಜೀವಕಿಂತ್ತ ಅನುಮಾನ ದೊಡ್ಡದಲ್ಲ. ಅನುಮಾನವನ್ನು ತೊರೆದು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ವೈರಸ್ ವಿರುದ್ಧ ಹೋರಾಡೋಣ.