ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರಿಗು ಮಂಡ್ಯ M P ಸುಮಲತಾ ಅವರಿಗೂ ಯಾಕೋ ಮನಸ್ಥಾಪ ಮುಗಿಯದ ಅಧ್ಯಾಯ ವಾಗಿದೆ. ನಟ ಅಂಬರೀಶ್ ಮರಣದ ನಂತರ ಮಡ್ಯ ಕ್ಷೇತ್ರದಲ್ಲಿ ಲೋಕಸಭಾ ಎಲೆಕ್ಷನ್ ನಿಜಕ್ಕೂ ರಣರಂಗವೇ ಆಗಿತ್ತು. ಮಾಜಿ ಮುಖ್ಯ ಮಂತ್ರಿಗಳು ಪ್ರತಿ ಅಂತದಲ್ಲೂ ಪ್ರತಿಸ್ಪರ್ಧಿ ವಿರುದ್ಧ ಒಂದಲ್ಲ ಒಂದು ಆರೋಪವನ್ನು ಮಾಡುತ್ತಲ್ಲೆ ಎಲೆಕ್ಷನ್ ಒಳಗೆ ಸೋತರು. ಸುಮಲತಾ ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ ವಿಜಯ ಸಾಧಿಸಿದರು. ಆದರೆ ಅದು ಅಲ್ಲಿಗೆ ಮುಗಿಯದೆ ಈಗ ಡ್ಯಾಂ ವರೆಗು ಬಂದು ನಿಂತ್ತಿದೆ. ಕೆ ಆರ್ ಎಸ್ ಡ್ಯಾಂ ಒಳಗೆ ಬಿರುಕಿದೆ ಎಂದು ಹೇಳಿದ ಮಾತು, ಕುಮಾರಸ್ವಾಮಿ ಅವರನ್ನು ಕೆರಳಿಸುವಂತೆ ಮಾಡಿದೆ. ಮತ್ತೆ ಅವರ ಮೇಲೆ ದಿನದಿಂದ ದಿನಕ್ಕೆ ಆರೋಪಗಳನ್ನು ಹೊರಿಸುತ್ತಲೆ ಇದ್ದಾರೆ.
ಈಗ ಕೆ ಆರ್ ಎಸ್ ಡ್ಯಾಂ ಒಳಗೆ ಬಿರುಕಿದೆಯ ಎಂದು ನೋಡಲು ಇಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧೀಕ್ಷಕ ಇಂಜಿನಿಯರ್ ವನರಾಜು, ಎಇಇ ಫಾರೂಕ್ ಅಬು ಅವರಿಂದ ರವೀಂದ್ರ ಶ್ರೀಕಂಠಯ್ಯ ಮಾಹಿತಿ ಸಂಗ್ರಹ ಮಾಡಿದ್ರು. ಡ್ಯಾಂ ಸುರಕ್ಷತೆ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದರು. ಇದೇ ವೇಳೆ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಗೇಟ್ ಬದಲಾವಣೆ ಕಾಮಗಾರಿಯನ್ನೂ ವೀಕ್ಷಿಸಿದರು. ಏನೆ ಇರಲಿ ಇಬ್ಬರು ದೊಡ್ಟವ್ಯಕ್ತಿಗಳು ಮಾದ್ಯಮದ ಮುಂದೆ ನಿಂತು ಹೀಗೆ ಕಿತ್ತಾಡುವುದು ಸರಿಯಲ್ಲ. ಇದನ್ನೆ ತಮ್ಮ ಬಂಡವಾಳವಾಗಿಸಿಕೊಂಡು ವಿವಾದಕ್ಕೆ ಪುಷ್ಠಿ ಕೊಡುತ್ತಿರುವ ಮಾದ್ಯಮಗಳ ಕೆಲಸವು ಸರಿ ಇಲ್ಲ.