ಅಂಬಿ ಅಂದ್ರೆ ಯಾವುದೇ ಸಮಯದಲ್ಲು ಸಹೋದರ ನಂತೆ ಜೊತೆಯಾಗಿ ನಿಲ್ಲುತ್ತಿದ್ದವರು ದೊಡ್ಡಣ್ಣ. ಆದರೆ ಈಗ ದೊಡ್ಡಣ್ಣ ಅವರು ಮಾಧ್ಯಮಗಳ ಜೊತೆ ಮಾತಾಡುವಾಗ ಅಂದು ಅಂಬಿ ಸಮಾಧಿಗೆ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಎರಡು ಗಂಟೆ ಕಾಯಿಸಿದರು ಅಲ್ಲಿ ಒಂದಿಬ್ಬರು ರಾಜಕಾರಣಿಗಳು ಇದ್ದರು. ಕಾಯಿಸಿದ ಮೇಲೆ ಭೇಟಿ ನೀಡಿದ ಅವರು ಇವರೆಲ್ಲ ಏನ್ ಮಾಡಿದ್ದಾರೆ ಎಂದು ನಿಡಿದ ಪತ್ರವನ್ನು ಎಸೆದು ಹೋದರು.ಅಂದು ಏನು ಮಾತಾಡದೆ ಆ ಬಿಸಾಡಿದ ಪೇಪರ್ ಎತ್ತಿಕೊಂಡು ಬಂದೆ. ಅವತ್ತು ನನಗೆ ಸಾಂತ್ವನ ಮಾಡಿದವರು ಹಿರಿಯ ನಟ ಎಸ್ ಶಿವರಾಮ್ ಮತ್ತು ಸುಮಲತಾ ಅವರು.
ರಾಜ್ ವಿಷ್ಣು ಅಂಬಿ ಕನ್ನಡ ಚಿತ್ರರಂಗದ ದೇವರುಗಳು ಎಲ್ಲರನ್ನು ಒಂದೆ ಸಮಾನವಾಗಿ ಕಾಣಬೇಕು.
ವಿಷ್ಣು ಸಮಾಧಿ ಆಗುವುದರಲಿ ಎರಡು ಮಾತಿಲ್ಲ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧವನ್ನು ನಾವು ನೆನೆಯುವುದಿಲ್ಲವ ಹಾಗೆ ಮುಂದೊಂದು ದಿನ ನಾವು ಮಾಡಿದ ಕೆಲಸ ನೆನೆಯುತ್ತಾರೆ.
ಅಂಬರೀಶ್ ಸ್ಮಾರಕ ನಿರ್ಮಿಸಿದ್ದು ಕುಮಾರಸ್ವಾಮಿ ಅಲ್ಲ, ಯಡಿಯೂರಪ್ಪ. ಅಂಬರೀಶ್ ನಿಧನರಾಗಿದ್ದಾಗ ಇದ್ದಿದ್ದು ನಾವು 4 ಜನ. ನಾನು, ವೆಂಕಟೇಶ್, ಅಭಿ, ಸುಮಲತಾ. ಅಭಿ ಹಠ ಮಾಡಿದ್ದಕ್ಕೆ ಬಾಡಿ ಮಂಡ್ಯಕ್ಕೆ ಕೊಂಡೊಯ್ದೆವು. ಸಿಎಂ ಆಗಿದ್ದ ನೀವು ಏರ್ಲಿಫ್ಟ್ ಮಾಡಲು ಏರ್ಫೋರ್ಸ್ ಬಳಿ ಮಾತನಾಡಿದ್ರಿ. ಅಂಬರೀಶ್ ಸ್ಮಾರಕ ನಿರ್ಮಿಸಿದ್ದು ಕುಮಾರಸ್ವಾಮಿ ಅಲ್ಲ, ಸಿಎಂ ಯಡಿಯೂರಪ್ಪ ಎಂದರು ಜೊತೆಗೆ
ಪದೇ ಪದೇ ಸಿನಿಮಾದವರೆಂಬ ಪದ ಬಳಸಬೇಡಿ. ಏಕೆ ಪದೇ ಪದೇ ಸಿನಿಮಾದವರೆಂದು ಕಡೆಗಣನೆ? ಸಿನಿಮಾದವರ ಬಗ್ಗೆ ಏಕಿಷ್ಟು ಕೀಳಾಗಿ ಮಾತಾಡ್ತೀರಿ? ಮಾತಿಗೆ ಮುಂಚೆ ಗಳಗಳನೆ ಕಣ್ಣೀರು ಹಾಕ್ತೀರಿ. ನೀವು ಯಾವ ನಟರಿಗೆ ಕಡಿಮೆ ಇದ್ದೀರಿ ಹೇಳಿ? ನಮಗೆ ಚಿತ್ರರಂಗವೆಂದರೆ ತಾಯಿ ಇದ್ದಂತೆ. ಯಾರಿಗೋ ಹೇಳಿದ್ರೂ ಎಲ್ಲರಿಗೂ ನೋವಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ದೊಡ್ಡಣ್ಣ ತಮ್ಮ ಕೋಪವನ್ನು ಹೊರಹಾಕಿದ್ರು.