ವದಂತಿಗಳಿಗೆ ಹೆದರಬೇಡಿ. ನಿಮ್ಮ ಜೀವ ಜೀವನ ನಿಮ್ಮ ನಂಭಿಕೆಯೊಳಗೆ. ಆದಷ್ಟು ಬೇಗ ಲಸಿಕೆ ಪಡೆಯಿರಿ. ಪ್ರಧಾನಮಂತ್ರಿ ಕರೆ
ಕೋವಿಡ್ 19 ರಿಂದ ಸಾಕಷ್ಟು ನಷ್ಟವನ್ನು ದೇಶದ ಜನತೆ ಜೊತೆಗೆ ಇಡೀ ದೇಶವೆ ಎದುರಿಸುತ್ತಿದೆ.
ಸರ್ಕಾರ ಸೇರಿದಂತೆ ಅನೇಕ ವಿಜ್ಞಾನಿಗಳು, ಡಾಕರ್ ಗಳು ಈ ವೈರಸ್ ವಿರುದ್ದ ಪ್ರತಿರೋಧಕ ಔಷಧಿ ಗಾಗಿ ಪ್ರತಿನಿತ್ಯವೂ ತಮ್ಮ ಲ್ಯಾಬ್ ಗಳಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ. ಅದರ ಫಲವಾಗಿ ಈ ವ್ಯಾಕ್ಸಿನ್.
ವ್ಯಾಕ್ಸಿನ್ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವದಂತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಇದರಿಂದ ಜನ ಸಾಮನ್ಯರು ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ತೋಚದೆ ಕೈ ಕಟ್ಟಿ ಕೂತಿದ್ದಾರೆ. ಆದರೆ ನಾವೆಷ್ಟೆ ತಾಳ್ಮೆ ವಹಿಸಿದರು ಈ ವೈರಸ್ ಆ ತಾಳ್ಮೆ ವಹಿಸುವುದಿಲ್ಲ. ಹಾಗಾಗಿ ನಾವು ಮುಂಜಾಗ್ರತ ಕ್ರಮ ಕೂಡಲೆ ತಜ್ಞರ ಸಲಹೆ ಮೇರೆಗೆ ಪಡೆಯುವುದು ಉತ್ತಮ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವಿಷಯವಾಗಿ “ಈಗಾಗಲೆ ನಾನು ಎರಡು ಡೋಸ್ ಹಾಕಿಸಿಕೊಂಡಿರುವೆ. ಇನ್ನೇನು ನೂರು ವರುಷ ತುಂಬಲಿರುವ ನನ್ನ ತಾಯಿ ಕೂಡ ಲಸಿಕೆ ಪಡೆದಿದ್ದಾರೆ.” ಎಂದು ತಿಳಿಸಿದ್ದಾರೆ. ಹಿಂಜರಿಕೆ ಬಿಟ್ಟು ಎಲ್ಲರೂ ಕೂಡಲೆ ವ್ಯಾಕ್ಸಿನ್ ಪಡೆಯಿರಿ ಎಂದು ರೆಡಿಯೋ ಕಾರ್ಯಕ್ರಮದ ತಮ್ಮ ಮನ್ ಕಿ ಬಾತ್ 78 ನೇ ಆವೃತ್ತಿ ಒಳಗೆ ತಿಳಿಸಿದ್ದಾರೆ.
ವಿಜ್ಞಾನಗಳನ್ನು ನಂಬಿರಿ.ವಿಜ್ಞಾನಿಗಳನ್ನು ನಂಬಿರಿ. ಇಡೀ ದೇಶದಲ್ಲಿ 31ಕೋಟಿಗು ಹೆಚ್ಚು ಲಸಿಕೆ ಪಡೆದಿದ್ದಾರೆ.
ಕೋವಯ19 ರ ಅಪಾಯ ಇನ್ನೂ ಇರುವುದರಿಂದ ನಾವು ಜಾಗೃತರಾಗೋಣ. ನಮ್ಮವರನ್ನು ಜಾಗೃತರಾಗಿ ಮಾಡೋಣ.