ವಿಷಕಾರಿ ಹಾವುಗಳ ಮರಿಗಳು ಹೊರ ಬರುವ ಸಮಯ. ಮರಿಗಳು ಕಚ್ಚಿದರು ಸಾವು ಸಂಭವಿಸುತ್ತದೆ. ಇನ್ನೆರಡು ತಿಂಗಳು ಮಕ್ಕಳುಗಳ ಮೇಲೆ ಜಾಗರೂಕತೆ ಇರಲಿ. ಉದಾಸೀನ ಮಾಡುವುದರಿಂದ ನಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಭಯಕಿಂತ ತಿಳುವಳಿಕೆ ಮುಖ್ಯ.
ಹಾವುಗಳು ಮೇ 15 ರಿಂದ ಆ 15 ರವೆಗೆಒಟ್ಟೆ ಇಟ್ಟು ಮರಿ ಮಾಡುವ ಕಾಲ. ಈ ಮೂರು ತಿಂಗಳು ನಮಗೆ ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ವಾಸಿಸುತ್ತಿರುವ ಜನರ ಕಣ್ಣುಗಳಿಗೆ ಹಾವುಗಳು ಮತ್ತು ಹಾವಿನ ಮರಿಗಳು ಕಾಣುತ್ತವೆ. ಇಟ್ಟಿಗೆಯಲ್ಲಿ, ಟೈರ್ ಸಂದಿಗಳಲ್ಲಿ, ಕಾಲು ದಾರಿ, ರಸ್ತೆ, ಮೀಟರ್ ಬಾಕ್ಸ್ ಹೀಗೆ ಎಲ್ಲಂದರಲ್ಲಿ ನಮಗೆ ಹಾವುಗಳು ಕಾಣಬಹುದು.
ಹಾವುಗಳು ನಮ್ಮ ಕಣ್ಣಿಗೆ ಬುದ್ದ ಕೂಡಲೆ ಅವು ನಮ್ಮನ್ನು ಕಚ್ಚುವುದಿಲ್ಲ. ಅವುಗಳಿಗೆ ನಾವು ತೊಂದರೆ ಕೊಟ್ಟಾಗ ತಮ್ಮ ರಕ್ಷಣೆಗೆ ನಮ್ಮ ಮೇಲೆ ದಾಳಿ ಮಾಡುತ್ತವೆ. ಆದರೆ ಮರಿಗಳು ಹಾಗಲ್ಲ. ಅವು ಕಚ್ಚುತ್ತವೆ. ಮರಿಗಳು ಕಚ್ಚಿದರು ಸಾವು ಸಂಭವಿಸುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲೆ ಕೆಲವು ಸಮೀಕ್ಷೆ ಪ್ರಕಾರ ಇಪ್ಪತ್ತಕ್ಕು ಹೆಚ್ಚ ಜಾತಿ ಹಾವುಗಳಿವೆ ಎಂದು ತಿಳಿದು ಬಂದಿದೆ.
ನಾಗರಹಾವು, ಕೆರೆ ಹಾವು, ಕೊಳಕು ಮಂಡಲ, ಕಟ್ಟಾವು ಉರಿ ಮಂಡಲ ಇನ್ನೂ ಕೆಲವು ಜಾತಿ ಹಾವುಗಳು ಬೆಂಗಳೂರಿನಲ್ಲಿ ಕಾಣುತ್ತೇವೆ. ಹಾವು ಕಚ್ಚಿದ ಕೂಡಲೆ ಬೇಕಾದ ಚಿಕಿತ್ಸೆ ಮಾಡಿಸಬೇಕು. ಒಂದುವೇಳೆ ಉದಾಸೀನ ಮಾಡಿದರೆ ಸಾವು ಕಟ್ಟಿಟ್ಟ ಬುತ್ತಿ. ಹಾಗಂತ ಹಾವನ್ನು ಮಡ ಕೂಡಲೆ ಅವುಗಳ ಮೇಲೆರಗುವುದು, ಬಿಸಿನೀರು, ಸೀಮೆ ಎಣ್ಣೆ ಹಾಕುವುದು ಮಾಡುವುದು ಬೇಡ. ಹಾವನ್ನು ಸಂರಕ್ಷಿಸುವವರಿಗೆ ಕಾರೆ ಮಾಡಿ. ನಮ್ಮಗಳ ಜೀವದ ಜೊತೆಗೆ ಅವುಗಳ ಜೀವರಾಶಿಯನ್ನು ರಕ್ಷಿಸಿಕೊಳ್ಳುವ ಜವಬ್ದಾರಿ ನಮ್ಮದು.