
ತೀವ್ರ ಕುತೂಹಲ ಕೆರಳಿಸಿದ್ದ ಈ ವಾರದ ಬಿಗ್ ಬಾಸ್ ಸಂಚಿಕೆಯಲ್ಲಿ ನಿಧಿ ಸುಬ್ಬಯ್ಯ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ನಿಧಿ ಸುಬ್ಬಯ್ಯ ಒಟ್ಟಾರೆ 84 ದಿನಗಳನ್ನು ಬಿಗ್ ಬಾಸ್ ನಲ್ಲಿ ಕಳೆದಿದ್ದರು. ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಪ್ರಿಯಾಂಕ, ರಘು ಗೌಡ, ಚಕ್ರವರ್ತಿ ಹಾಗೂ ನಿಧಿ ಸುಬ್ಬಯ್ಯ ಈ ವಾರದ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.
ಬಿಗ್ ಬಾಸ್ ವಿಶೇಷ ಅಧಿಕಾರದ ಆಧಾರದ ಮೇಲೆ ನಿಧಿ ಸುಬ್ಬಯ್ಯ ಅರವಿಂದ್ ಅವರನ್ನು ನಾಮಿನೇಟ್ ಮಾಡಿ ಹೊರ ಬಂದರು. ಕಳೆದ ವಾರವಷ್ಟೇ ನಿಧಿ ಹಾಗೂ ಅರವಿಂದ್ ನಡುವೆ ಮಾತಿನ ಚಕಮಕಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನು ಕಿಚ್ಚ ಸುದೀಪ್ ಮಾತುಕತೆ ಸಮಯದಲ್ಲಿ ನಿಮ್ಮ ಬಿಗ್ ಬಾಸ್ ಅನುಭವ ಹೇಳಿ ಅಂದಾಗ
” ವಯಸ್ಸಾದ ಮೇಲೆ ನಾನೇನಾದರೂ ಆಟೋ ಬಾಯೋಗ್ರಫಿ ಬರೆದರೆ ಬಿಗ್ ಬಾಸ್ ನ ಒಂದು ಅಧ್ಯಾಯ ಇರುತ್ತದೆ ಎಂದರು.
ಫೈನಲ್ ನಲ್ಲಿ ಯಾರನ್ನು ನೋಡಲು ಇಷ್ಟ ಪಡುವಿರಿ ಎಂಬ ಪ್ರಶ್ನೆಗೆ
“ದಿವ್ಯಾ U, ಪ್ರಶಾಂತ, ವೈಷ್ಣವಿ, ಶುಭ ಹಾಗೂ ಮಂಜು” ಇವರುಗಳ ಹೆಸರನ್ನು ಸೂಚಸಿದರು. ಹಾಗೂ
ಮಂಜು ಪಾವಗಡ ವಿನ್ನರ್ ಆಗಲೆಂದು ಬಯಸುತ್ತೇನೆ ಎಂದರು.
ಮುಂದಿನ ವಾರ ಯಾರು ಎಲಿಮಿನೇಷನ್ ಆಗುತ್ತಾರೆ ಎಂಬ ಪ್ರಶ್ನೆಗೆ ಚಕ್ರವರ್ತಿ ಹೆಸರನ್ನು ಸೂಚಿಸಿದರು.