Light House information in Kannada | ಲೈಟ್ ಹೌಸ್ ಗಳನ್ನು ಯಾಕೆ ನಿರ್ಮಿಸುತ್ತಾರೆ?

Light House information in Kannada:

ನೀವೇನಾದರು ಸಮುದ್ರ ತೀರಗಳಿಗೆ ಭೇಟಿ ಕೊಟ್ಟಿದ್ದರೆ ಅಲ್ಲಲ್ಲೇ ಅತಿ ಎತ್ತರವಾದ ಗೋಪುರ ಶೈಲಿಯ ಈ Light House ಗಳನ್ನು ಕಂಡಿರುತ್ತೀರಿ. ಬನ್ನಿ ಈ ಲೈಟ್ ಹೌಸ್ ಗಳ ಬಗ್ಗೆ ಸ್ವಲ್ಪ ಮಾಹಿತಿ ತಿಳಿದು ಬರೋಣ. ಲೈಟ್ ಹೌಸ್ ಗಳು ಸಮುದ್ರ ಯಾನ ಮಾಡುವವರಿಗೆ ಬಹಳ ಅನುಕೂಲ ಮಾಡುತ್ತವೆ. ಈ  Light House ಗಳು ನಾವಿಕರು ಯಾವ ಸ್ಥಳದಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತವೆ. ಸಾಮಾನ್ಯವಾಗಿ ಸಮುದ್ರ ತೀರಗಳಲ್ಲಿ ಈ Light House ಗಳನ್ನು ಕಾಣಬಹುದು. ಕೆಲವೊಮ್ಮೆ ಲೈಟ್ ಹೌಸ್ ಗಳನ್ನು ಅಪಾಯಕಾರಿ ಯಾದ ಸ್ಥಳಗಳಲ್ಲಿ ಕೂಡ ನಿರ್ಮಿಸುತ್ತಾರೇ. ಇದರಿಂದ ನಾವಿಕರಿಗೆ ಆ ಸ್ಥಳದಿಂದ ದೂರ ಉಳಿಯಲು ಅನುಕೂಲವಾಗುತ್ತದೆ. ವಿದ್ಯುತ್ ಆವಿಷ್ಕಾರದ ನಂತರ ಈ ಲೈಟ್ ಹೌಸ್ ಗಳಲ್ಲಿ ವಿದ್ಯುತ್ ದೀಪಗಳನ್ನು ಬಳಸಲಾಗುತ್ತಿದೆ.

ಪುರಾತನ ಕಾಲದಲ್ಲಿ ಲೈಟ್ ಹೌಸ್ ಗಳಲ್ಲಿ ಬೆಂಕಿಯ ಕಟ್ಟಿಗೆ, ಸೀಮೆ ಎಣ್ಣೆ ದೀಪಗಳನ್ನು ಬಳಸಲಾಗುತ್ತಿತ್ತು. ಲೈಟ್ ಹೌಸ್ ಗಳನ್ನೂ ಕಂಡು ಹಿಡಿಯುವದಕ್ಕೂ ಮುಂಚೆ ಸಮುದ್ರ ಯಾನ ಬಹಳ ಕಷ್ಟಕಾರಿಯಾಗಿತ್ತು. ನಾವಿಕರು ಮಾರ್ಗಮಧ್ಯದಲ್ಲೆ ದಾರಿತಪ್ಪುತ್ತಿದ್ದರು, ರಾತ್ರಿ ವೇಳೆಯಲ್ಲಂತೂ ಅಪಾಯಕಾರಿ ಬಂಡೆಗಳಿಗೆ ನೌಕೆಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿದ್ದವು. ಹೀಗೆ ಈ ಲೈಟ್ ಹೌಸ್ ಗಳು ಹಲವಾರು ರೀತಿಯಲ್ಲಿ ನಾವಿಕರಿಗೆ ಸಹಾಯಮಾಡುತ್ತಿದ್ದವು. ಇತ್ತೀಚಿಗೆ ಜಿ ಪಿ ಎಸ್ ಡಿವೈಸ್ ಗಳು ಬಳಕೆಯಲ್ಲಿದ್ದರೂ ಕೂಡ ಈ ಲೈಟ್ ಹೌಸ್ ಗಳು ಕಾರ್ಯ ನಿರ್ವಹಿಸುತ್ತಿರುವುದು ಗಮನಾರ್ಹ.  ಪ್ರಸ್ತುತ ಭಾರತದಲ್ಲಿ 185 ಲೈಟ್ ಹೌಸ್ ಗಳು ಇವೆ. ಲೈಟ್ ಹೌಸ್ ಗಳು ಪ್ರೇಕ್ಷಣೀಯ ಸ್ಥಳಗಳಾಗಿ ಕೂಡ ಗುರುತಿಸಲ್ಪಡುತ್ತದೆ.

Also read: Kapu Light House 

Thank you

What is the number of Light houses in India?

In India 185 Light houses are there.

Can i get Light House information in Kannada?

Yes. Read our article about Light house information in Kannada.

 

We will be happy to hear your thoughts

Leave a reply

Masala Chai Media
Logo
%d bloggers like this: