ಇಂದು ಸಾಯಂಕಾಲ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೇರಿದ ಸಭೆ. ಕೊವಿಡ್ 19 ತಡೆಯಲು ಈಗಾಗಲೆ ರಾಜ್ಯದಲ್ಲಿ ಲಾಕದ ಡೌನ್ ಘೋಷಿಸಿದ್ದ ಸರ್ಕಾರ ಸಂಪೂರ್ಣವಾಗಿ ಸೋಂಕು ಹರಡುವಿಕೆ ಚೈನ್ ಲಿಂಕ್ ಗೆ ಕತ್ತರಿ ಹಾಕುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದ್ದು, ಆ ಸಭೆಯೊಳಗೆ ಎಲ್ಲಾ ರೀತಿಯಲ್ಲಿಯೂ ಆಲೋಚಿಸಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಜೂನ್ 7 ರ ವರೆಗೆ ಮಾತ್ರ ಲಾಕ್ ಡೌನ್ ಘೋಷಿಸಿದ್ದ ಸರ್ಕಾರ ಮತ್ತೆ ಜೂನ್ 12 ರ ವರೆಗೆ ಮುಂದೂಡುವಂತೆ ಇಂದಿನ ಸಭೆಯೊಳಗೆ ತಜ್ಞರು ಮತ್ತು ಸಂಪುಟ ಸದಸ್ಯರೊಂದಿಗೆ ಮುಖ್ಯಂಮತ್ರಿಗಳು ಸೇರಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಜೊತೆ ಜೊತೆಗೆ ಕೆಲವು ನಿರ್ಭಂದಗಳು ಮತ್ತು ಮಾರ್ಪಟನ್ನು ಈ ಹಂತದೊಳಗೆ ಮಾಡಲಾಗಿದ್ದು ಜನ ಸಮುದಾಯದ ಜೀವನಕ್ಕೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಹೇಳಿದ್ದಾರೆ.
ಈ ಸಲ 500. ಕೋಟಿ ಪ್ಯಾಕೆಜ್ ನೀಡಲಾಗಿದ್ದು ಅದನ್ನು ಸಿನಿಮಾ, ಮಾದ್ಯಮದ ನೊಂದಾಯಿತ ಸದಸ್ಯರಿಗೆ ಮತ್ತು ಕೆಲ ಅಸಂಘಟಿತ ಕಾರ್ಮಿಕರಿಗೆ ತಲ 3000 ಸಾವಿರ. ಭಾರತ ಸರ್ಕಾರದ ಪರಿಹಾರ ಯೋಜನೆ ಅಡಿಯೊಳಗೆ ನೊಂದಾಯಿಸಿದ ಮೀನುಗಾರರಿಗೆ ತಲ 3000. ಹಾಗೂ ಮುಜರಾಯಿ ಒಳಗೆ ಕೆಲಸ ಮಾಡುವ ಸಿ ವರ್ಗದ ಅರ್ಚಕರಿಗೆ ಮತ್ತು ಅಡುಗೆ ಸಿಂಬಂಧಿಗಳಿಗೆ ತಲ 3000 ನೀಡುವುದಾಗಿ ತಿಳಿಸಲಾಗಿದೆ.
ಎಲ್ಲರ ಆರೋಗ್ಯವನ್ನು ಕಾಪಾಡುವುದೆ ಇದರ ಉದ್ದೇಶ. ಜಾಗತಿಕ ಅಂತರ ಕಾಪಡಿಕೊಳ್ಳುತ್ತ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಮೂಲಕ. ಭಯವನ್ನು ತೊರೆದು ಕೊರೊನದ ಬಗ್ಗೆ ಅರಿವನ್ನು ಮೂಡಿಸಿಕೊಳ್ಳುವ ಮೂಲಕ ಕೊರೊನ ಓಡಿಸುವುದರಲ್ಲಿ ಸಫಲರಾಗೋಣ ಎಂಬುದು ಈ ಲಾಕ್ ಡೌನ್ ವಿಸ್ತರಣೆಯ ಮುಖ್ಯ ಉದ್ದೇಶ.