ಕೋವಿಡ್ ಹಿನ್ನೆಲೆಯಲ್ಲಿ ಜನ ಸಮುದಾಯವೆ ನಲುಗಿ ಹೋಗಿದೆ. ಅದರಲ್ಲು ವಿದ್ಯಾರ್ಥಿಗಳು ಮಾತ್ರ ಕ್ಷಣಕ್ಷಣಕ್ಕೂ ಖಿನ್ನತೆಯಿಂದ ಬಳಲುತಿದ್ದಾರೆ. ಆನ್ಲೈನ್ ತರಗತಿ, ನೆಟ್ವರ್ಕ್ ಸಮಸ್ಯೆ, ಪರಿಕ್ಷೆಯ ವಿಧಾನ ಹೇಗೊ, ಪಲಿತಾಂಶ ಎಷ್ಟು ಬರುತ್ತದೆಯೊ. ಜ್ಞಾನರ್ಜನೆ ಎಷ್ಟರ ಮಟ್ಟಿಗೆ ಆಗುತ್ತದೆಯೊ ಎಂದು ಕಳವಳ ಕಾಡಿದರೆ. ಒಂದಷ್ಟು ಒತ್ತಡದಲ್ಲೆ ದಿನ ದೂಡವಂತ್ತಾಗಿದೆ. ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡದೆ ತೇರ್ಗಡೆ ಮಾಡಿದ್ದಾಯಿತು.
ಹತ್ತನೇ ತರಗತಿಗೆ ಹೊಸ ಪರೀಕ್ಷೆ ಕ್ರಮವನ್ನು ಅಳವಡಿಸಿ ಪರೀಕ್ಷೆ ನಡೆಸಲು ದಿನಾಂಕ ನಿಗಧಿಯಾಯಿತು. ಪಿಯುಸಿ ಪರೀಕ್ಷೆ ಇಲ್ಲದೆ ಪಾಸ್ ಎಂದು ಘೋಷಣೆ ಯು ಆಯಿತು. ಆದರೆ ರಿಪಿಟರ್ಸ್ ವಿಷಯದಲ್ಲಿ ತಟಸ್ಥ ವಾಗಿದ್ದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಈಗ ಅದರ ತೀರ್ಪು ಇಂದು ಸೋಮವಾರ ಬರಲಿದ್ದು, ಎಲ್ಲರಲ್ಲಿಯೂ ಕುತೂಹಲ ದುಪ್ಪಟ್ಟಾಗಿದೆ. ಸುಮಾರು ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಕಟ್ಟಿದ್ದು, ಏಳು ಸಾವಿರ ವಿದ್ಯಾರ್ಥಿಗಳು ರಿಪಿಟರ್ಸ್ ಇದ್ದಾರೆ. ಈಗ ರಿಪಿಟರ್ಸ್ ಗೆ ಮೂವತ್ತೈದು ಅಂಕ ನೀಡಿ, ಐದು ಗ್ರೇಸ್ ಮಾರ್ಕ್ಸ್ ಕೊಟ್ಟು, ಪಾಸ್ ಮಾಡಬಹುದು ಎಂದು ಹೇಳಲಾಗುತಿದ್ದು.ಖಾಸಗಿಯಾಗಿ ಪರೀಕ್ಷೆ ಕಟ್ಟಿರುವ ವಿದ್ಯಾರ್ಥಿಗಳನ್ನು ಪರಿಗಣಿಸಲಾಗದು ಎಂದು ತಿಳಿಸಿದ್ದಾರೆ. ಏನೆ ಇದ್ದರು ಸೋಮವಾರ ತೀರ್ಪು ಯಾರ ಪರ ಎಂದು ಕಾದೆ ನೋಡಬೇಕು.