Pruthvi Ambaar ನಟನೆಯ ‘Doordarshana’ ಅಂಗಳದಿಂದ ಬಂತು Poster release.. ಮೊದಲ ನೋಟದಲ್ಲಿ ನಿರೀಕ್ಷೆ ಹೆಚ್ಚಿಸಿದ Sukesh & Team.
ವಿಭಿನ್ನ ಕಂಟೆಂಟ್ ಮೂಲಕ ಟಾಕ್ ಕ್ರಿಯೇಟ್ ಮಾಡಿರುವ Doordarshana ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್ ನಲ್ಲಿ Pruthvi Ambaar, Ugram Manju, Harini, Sundhar, Ayaana ಕಾಣಿಸಿಕೊಂಡಿದ್ದು, ಜೊತೆಗೆ ದೂರದರ್ಶನವಿರುವ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. Poster release ಮಾಡಿದ ಚಿತ್ರತಂಡ ಮಾಧ್ಯಮದ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ Sukesh Shetty ಮಾತನಾಡಿ, 1980ರ ಕಾಲಘಟ್ಟದಲ್ಲಿ ನಡೆಯುವ ಸಬ್ಜೆಕ್ಟ್.. ನಾವು ನಮ್ಮ ಹಿರಿಯರ ಜೊತೆ ಅನುಭವಿಸಿ, ಕಳೆದು ಹೋದ, ನಾವು ನೋಡಿರುವ, ಕೇಳಿರುವ ಮಾಹಿತಿ ಕಲೆ ಹಾಕಿ ಕಥೆಯನ್ನು ಕಟ್ಟಿಕೊಡಲಾಗಿದೆ. ಒಂದು ಟಿವಿ ಸುತ್ತ ಕಥೆ ನಡೆಯುತ್ತದೆ. Pruthvi, Ugram Manju ಹೀಗೆ ಪ್ರತಿಯೊಬ್ಬರನ್ನು ನೀವು ಬೇರೆ ರೀತಿ ನೋಡಬಹುದು. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ತಾರೆ. ನಾವು ರಿಯಲಿಸ್ಟಿಕ್ ಆಗಿ, ಅದೇ ರೀತಿ ಮ್ಯಾನರಿಸಂ ದಾಟಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.
ನಾಯಕ Pruthvi Ambaar ಮಾತನಾಡಿ, Doordarshana ಸಿನಿಮಾ ನನಗೆ ಬಹಳ ಕನೆಕ್ಟ್ ಆಗಿದೆ. ನಾನು ಹುಟ್ಟಿದ್ದು 88ರಲ್ಲಿ. ನನ್ನ ಪೀಳಿಕೆಗೆಯಲ್ಲಿ ಪ್ರೀ-ಟೆಕ್ನಾಲಜಿ ಹಾಗೂ ಟೆಕ್ನಾಲಜಿ ಎರಡನ್ನೂ ನೋಡಿದ್ದೇನೆ. ನಾನು ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಸರ್ ಕಥೆ ಹೇಳಿದಾಗ ನಮ್ಮೂರ ಕಥೆ ಕೇಳಿದಾಗೇ ಆಯ್ತು. ಈ ಸಿನಿಮಾ ಮಾಡಲೇಬೇಕು ಎಂದು ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ ಎಂದರು.
Doordarshana Movie Team
For more related videos and updates – Keep visiting our website- Masala Chai media
Thank you