ಸಾರ್ವಜನಿಕರ ಜೀವನದಲ್ಲಿ ಆಟ ಆಡುವುದು ಎಂದರೆ ವೈರಸ್ ಗಳಿಗಿಂತ ಅಧಿಕಾರಿಗಳಿಗು ಬಲು ಆಸೆ. ಅವರ ಆಟಕ್ಕೆ ಮಕ್ಕಳ ಪ್ರಾಣ ಪಣ ಇಡುವಂತಹ ಕೆಲಸ ನಮ್ಮದು.ಎಂಬುದು ಈಗ ಹತ್ತನೇ ತರಗತಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿರುವ ಮಕ್ಕಳ ಹೆತ್ತ ಪೋಷಕರ ಗೋಳು. ಒಂದೆಡೆ ಹೊಸ ಪ್ರಕಾರದ ಪರೀಕ್ಷ ಮಾದರಿ. ಮತ್ತೊಂದೆಡೆ ಕೊರೊನ ಭಯ. ಈ ನಡುವಿನಲ್ಲಿ ಆನ್ಲೈನ್ ತರಗತಿಯೊಳಗೆ ಕಲಿತದ್ದು ಎಷ್ಟರಮಟ್ಟಿಗೆ ಫಲ ಕೊಡುವುದೊ ಎಂಬ ಆತಂಕ. ಈ ಮಧ್ಯೆ ಜುಲೈ 19 ಮತ್ತು 22ರಂದು ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆ ಇಂದು ಎಸ್ಎಸ್ಎಲ್ಸಿ ಪರೀಕ್ಷಾರ್ಥಿಗಳೊಂದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.
‘ಬನ್ನಿ ವಿದ್ಯಾರ್ಥಿಗಳೇ SSLC ಪರೀಕ್ಷೆಯನ್ನ ಆತ್ಮಸ್ಥೈರ್ಯದಿಂದ ಬರೆಯೋಣ’ ಎಂಬ ಶೀರ್ಷಿಕೆ ಅಡಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಇವತ್ತು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಸಂವಾದ ಕಾರ್ಯಕ್ರಮ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿದ್ದು, ಆಯಾ ಜಿಲ್ಲೆಯ ಡಯಟ್ ಮತ್ತು ಡಿ.ಡಿ.ಪಿ.ಐ ಅಧಿಕಾರಿಗಳು ಭಾಗಿ ಆಗಲಿದ್ದಾರೆ. ಅವರು ಈ ರೀತಿಯ ನೂರಾರು ಸೆಮಿನಾರ್, ಸಂವಾದ ಏನಾದರು ರೂಪಿಸಿಕೊಳ್ಳಲಿ ಮಕ್ಕಳಿಗೆ ಪರೀಕ್ಷೆ ಮತ್ತು ಕೊರೊನಾ ದ ಒತ್ತಡ ಇಲ್ಲದೆ ನೆಮ್ಮದಿಯ ಪಲಿತಾಂಶ ಪಡೆಯುವಂತಾಗಲಿ. ಈ ಸಲದ ಪರೀಕ್ಷೆ ಜವಬ್ದಾರಿ ಬರಿ ಶಿಕ್ಷಕರಲ್ಲದೆ ಸಂಪೂರ್ಣವಾಗಿ ಪೋಷಕರು, ಸರ್ಕಾರ, ಸಾರ್ವಜನಿಕರು, ಆರೋಗ್ಯ ಇಲಾಖೆ, ಮತ್ತು ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಕ್ಕೆ ಸಂಬಂಧಿಸಿದೆ.
All the best my dear students.