ವಿವಾದಕ್ಕೆ ಈಡಾಗಿದ್ದ Ugliest Language in India ಗೂಗಲ್ ಸರ್ಚ್ ರಿಸಲ್ಟ್ ಬಗ್ಗೆ ಗೂಗಲ್ ಕಂಪನಿ ಬಹಿರಂಗವಾಗಿ ತನ್ನ ಟ್ವಿಟ್ಟರ್ ಖಾತೆ ಮೂಲಕ ಕನ್ನಡಿಗರಿಗೆ ಕ್ಷಮೆ ಯಾಚನೆ ಮಾಡಿದೆ. ಕರ್ನಾಟಕ ಸರ್ಕಾರ ಗೂಗಲ್ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಗೂಗಲ್ ಕಂಪನಿಯಿಂದ ಪ್ರತಿಕ್ರಿಯೆ ಬಂದಿದೆ.
ಗೂಗಲ್ ಮಾಡಿದ ಟ್ವೀಟ್ ಹೀಗಿದೆ.
“ಹುಡುಕುವುದು ಯಾವಾಗಲೂ ಪ್ಪರಿಪೂರ್ಣವಾಗಿರುವಿಲ್ಲ. ಕೆಲವೊಮ್ಮೆ, ಇಂಟರ್ನೆಟ್‌ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ನಮ್ಮ ಆಲ್ಗೋರಿದಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾ ಶೀಲವಾಗಿರುವುದನ್ನು ಮುಂದುವರಿಸಿದ್ದೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದಾರೆ ನಾವು ಕ್ಷಮೆ ಯಾಚನೆ ಯಾಚಿಸುತಿದ್ದೇವೆ.”
We apologize for the misunderstanding and hurting any sentiments. pic.twitter.com/nltsVezdLQ
— Google India (@GoogleIndia) June 3, 2021
ಕನ್ನಡಿಗರಿಗೆ ಕನ್ನಡದಲ್ಲೇ ಕ್ಷಮೆ ಯಾಚಿಸಿರುವುದು ಶ್ಲಾಘನೀಯ. ಇನ್ನೂ ಮುಂದಾದರೂ ಗೂಗಲ್ ಈ ರೀತಿಯ ತಪ್ಪುಗಳು ಆಗದೆ ಇರದ ಹಾಗೆ ನೋಡಿಕೊಂಡರೆ ಸಾಕು.