ಐಎಂಎ ಹಗರಣವು ಸಾರ್ವಜನಿಕರ ನಂಬಿಕೆಗೆ ಕೊಡಲಿ ಪೆಟ್ಟಾಕಿದ್ದು ಇನ್ನೂ ಈಗಲೂ ಸಾರ್ವಜನಿಕರಿಗೆ ಮರೆಯಲಾಗದ ಕಹಿ ಘಟನೆ ಹಾಗೆ ಉಳಿದಿದೆ. ಇದರ ತನಿಖೆಯ ಬೆನ್ನತ್ತಿದ ಸಕ್ಷಮ ಪ್ರಾಧಿಕಾರವು ಈಗ ಮಾಜಿ ಸಚಿವರಾದ ರೋಷನ್ ಬೇಗ್ ಅವರ ಆಸ್ತಿಯನ್ನು ಸೀಜ್ ಮಾಡಲಾಗಿದೆ. ಸರ್ಕಾರ 16.81 ಕೋಟೆಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರ ಅದರ ವಿವರವನ್ನು ತಿಳಿಸಲಾಗಿದೆ. ಬ್ಯಾಂಕ್ ಅಕೌಂಟ್ಗಳಲ್ಲಿದ್ದ ₹2.32 ಕೋಟಿ ₹8.91 ಕೋಟಿ ಮೌಲ್ಯದ ಸೈಟ್ಗಳು. ₹42.4 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳು. ₹6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ. 1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳು ಸೀಜ್. ಹಳೆ ಮನೆ ರೇಟ್ ಬಿಟ್ಟು ₹3.64 ಕೋಟಿ ಮೌಲ್ಯದ ಮನೆ ಸೀಜ್. ರೋಷನ್ ಬೇಗ್ ಅವರಿಗೆ ಸೇರಿದ ಒಟ್ಟು 6 ಬ್ಯಾಂಕ್ ಅಕೌಂಟ್ಗಳನ್ನ ಸೀಜ್ ಮಾಡಲಾಗಿದೆ; ಅದರ ಡೀಟೇಲ್ಸ್ ಇಲ್ಲಿದೆ.
ಕೋ ಅಪರೇಟಿವ್ ಬ್ಯಾಂಕ್ – ವಿಧಾನಸೌಧ: 33 ಲಕ್ಷ ರೂಪಾಯಿ. ಕಾರ್ಪೋರೇಷನ್ ಬ್ಯಾಂಕ್ – ಸದಾಶಿವನಗರ: 4,265 ರೂಪಾಯಿ. ಕೆನರಾ ಬ್ಯಾಂಕ್ – ವಸಂತನಗರ: 16 ಲಕ್ಷ ರೂಪಾಯಿ. ಸಿಂಡಿಕೇಟ್ ಬ್ಯಾಂಕ್ – ಫ್ರೇಜರ್ ಟೌನ್: 88 ಸಾವಿರ ರೂಪಾಯಿ. ಹೆಚ್ಡಿಎಫ್ಸಿ ಬ್ಯಾಂಕ್ – ತಿಪ್ಪಸಂದ್ರ: 1.08 ಕೋಟಿ ರೂಪಾಯಿ. ಕೆನರಾ ಬ್ಯಾಂಕ್ – ಜಯನಗರ: 76 ಲಕ್ಷ ರೂಪಾಯಿ. ಸರ್ಕಾರ ಸೀಜ್ ಮಾಡಿರುವ ಚಿನ್ನಾಭರಣ. 120 ಸವರನ್ ಚಿನ್ನದ ಆಭರಣಗಳ ಜಪ್ತಿ. ಬರೋಬ್ಬರಿ 26.5 ಲಕ್ಷ ಮೌಲ್ಯದ 960 ಗ್ರಾಂ ಚಿನ್ನಾಭರಣ. 32 ಕೆ.ಜಿ ಬೆಳ್ಳಿ ಆಭರಣ, ಸಾಮಗ್ರಿ ಹಾಗೂ ವಸ್ತುಗಳು ಸೀಜ್.ಬರೋಬ್ಬರಿ 16 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಸೀಜ್. ಒಟ್ಟು 42.4 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ವಸ್ತುಗಳು ಸೀಜ್. ಸರ್ಕಾರ ಸೀಜ್ ಮಾಡಿರುವ ರೋಷನ್ ಬೇಗ್ರ ಆಸ್ತಿಗಳು. ಒಟ್ಟು 8.91 ಕೋಟಿ ಮೌಲ್ಯದ ಆಸ್ತಿಗಳ ಸೀಜ್. ಸರ್ಕಾರ ಸೀಜ್ ಮಾಡಿರುವ ರೋಷನ್ ಶೇರ್ & ಹೂಡಿಕೆಗಳು. ದಾನಿಷ್ ಪಬ್ಲಿಕೇಷನ್ಸ್ನ 3.75 ಲಕ್ಷ ಮೌಲ್ಯದ 3750 ಶೇರ್ಗಳು. ಪ್ರೇಸ್ಟಿಜ್ ಎಸ್ಟೇಟ್ ಲಿಮಿಟೆಡ್ನ 98.8 ಸಾವಿರ ಮೌಲ್ಯದ 540 ಶೇರ್ಗಳು.
ಚರನ್ ಕೋ ಅಪರೇಟಿವ್ ಬ್ಯಾಂಕ್ ಸದಸ್ಯತ್ವದ 31.5 ಸಾವಿರ ಮೌಲ್ಯದ ಶೇರ್. ದಾನಿಷ್ ಪಬ್ಲಿಕೇಷನ್ ಈಕ್ವಿಟಿ 12.5 ಲಕ್ಷ ಮೌಲ್ಯದ 1250 ಶೇರ್ಗಳು. ಸಬೀಹಾ ಅಪೆರಲ್ಸ್ ಈಕ್ವಿಟಿ 50 ಸಾವಿರ ಮೌಲ್ಯದ 5000 ಶೇರ್ಗಳು. ಒಟ್ಟು 6.80 ಲಕ್ಷ ಮೌಲ್ಯದ ಶೇರ್ & ಹೂಡಿಕೆ ಸೀಜ್. ಸರ್ಕಾರ ಸೀಜ್ ಮಾಡಿರುವ ರೋಷನ್ ಅವರ ವಾಣಿಜ್ಯ ಸಂಕಿರ್ಣಗಳು. ಒಟ್ಟು 1.73 ಕೋಟಿ ಮೌಲ್ಯದ ರೋಷನ್ ವಾಣಿಜ್ಯ ಕಟ್ಟಡಗಳು ಸೀಜ್. ರೋಷನ್ ಬೇಗ್ರ 2 ಮನೆಗಳ ಸೀಜ್.!
ಮೇಲ್ಕಂಡ ಆಸ್ತಿ ವಿವರಗಳನ್ನು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಹೈ ಕೋರ್ಟ್ಗೆ ಸಲ್ಲಿಕೆ ಮಾಡಿದ್ರು ಅನ್ನೋ ಮಾಹಿತಿ ನ್ಯೂಸ್ಫಸ್ಟ್ಗೆ ಎಕ್ಸ್ಕ್ಲೂಸಿವ್ ಆಗಿ ಸಿಕ್ಕಿದೆ.